ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳ ಕಸರತ್ತು

ನಗರದಲ್ಲಿ ಕಟ್ಟುನಿಟ್ಟಿನ ಸೀಲ್‌ಡೌನ್‌ ಜಾರಿಗೆ ಜಿಲ್ಲಾಡಳಿತ ಕ್ರಮ, ನಾಗರಿಕರ ನೆರವಿಗೆ ನೋಡಲ್‌ ಅಧಿಕಾರಿಗಳ ನೇಮಕ
Last Updated 18 ಏಪ್ರಿಲ್ 2020, 14:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ನಾಲ್ಕು ಕೋವಿಡ್‌ 19 ಪ್ರಕರಣಗಳು ವರದಿಯಾಗಿ, ಒಬ್ಬ ಮೃತಪಟ್ಟ ಬೆನ್ನಲ್ಲೇ ಜಿಲ್ಲಾಡಳಿತ ನಗರದಲ್ಲಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ.

ನಗರಸಭೆಯ 31 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಜಾರಿಗೊಳಿಸಲಾಗಿದ್ದು, ನಗರದ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿದಂತೆ ಒಳ ರಸ್ತೆಗಳಲ್ಲಿ ಅಲ್ಲಲ್ಲಿ ಜನರು, ವಾಹನಗಳ ಓಡಾಟಕ್ಕೆ ತಡೆ ಒಡ್ಡುವ ನಿಟ್ಟಿನಲ್ಲಿ ತಡೆಬೇಲಿ ಹಾಕಲಾಗಿದೆ.

ನಗರದಲ್ಲಿ ಸಾರ್ವಜನಿಕರಿಗೆ ಮನೆಯಿಂದ ಹೊರಬಾರದಂತೆ ನಗರಸಭೆ ನಾಲ್ಕು ಆಟೊಗಳ ಮೂಲಕ ಪ್ರಚಾರ ಕಾರ್ಯ ನಡೆಸಿದ್ದು, ಅನಾವಶ್ಯಕವಾಗಿ ತಿರುಗಾಡುವವರ ನಿಯಂತ್ರಣಕ್ಕಾಗಿ ನಗರದಾದ್ಯಂತ 800 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ನಗರದ ಪ್ರತಿ ವಾರ್ಡ್‌ಗೆ ತಲಾ ಒಬ್ಬ ನೋಡಲ್ ಅಧಿಕಾರಿ, ಕೆಲ ಸ್ವಯಂ ಸೇವಕರನ್ನು ನಿಯೋಜಿಸಲಾಗಿದ್ದು, ಇವರ ಮೂಲಕ ಜನರು ದಿನಸಿ, ತರಕಾರಿ, ಹಾಲು, ಔಷಧಿಯಂತಹ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳುವಂತೆ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ.

ನಾಗರಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನೋಡಲ್‌ ಅಧಿಕಾರಿ ವಾರ್ಡ್‌ವಾರು ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಿದ್ದು, ಅದರ ಮೂಲಕ ನಾಗರಿಕರ ಬೇಕು, ಬೇಡಗಳನ್ನು ಅರಿಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ಇನ್ನೊಂದೆಡೆ ನಗರಸಭೆ ನಗರದ ಪ್ರಮುಖ ರಸ್ತೆಗಳು, ಬಡಾವಣೆಗಳಲ್ಲಿ ವೈರಸ್‌ ನಾಶಕ ದ್ರಾವಣ ಸಿಂಪಡಣೆ ಮಾಡುವ ಕಾರ್ಯಕ್ಕೆ ಮುಂದಾಗಿದೆ. ನಾಲ್ಕು ಪ್ರಕರಣಗಳು ವರದಿಯಾದ ನಗರದ 17ನೇ ವಾರ್ಡ್‌ ಮೇಲೆ ಅಧಿಕಾರಿಗಳು ವಿಶೇಷ ನಿಗಾ ವಹಿಸಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಹೊಸ ಸೂಕ್ಷ್ಮ ಪ್ರದೇಶಗಳ ಪಟ್ಟಿಯಲ್ಲಿ ಜಿಲ್ಲೆಯನ್ನು ಸೇರ್ಪಡೆ ಮಾಡಿತ್ತು. ಅದರ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಪ್ರಕರಣಗಳು ವರದಿಯಾಗಿ ಮೊದಲೇ ಭೀತಿಯಲ್ಲಿದ್ದ ಜನರನ್ನು ಮತ್ತಷ್ಟು ತಲ್ಲಣಗೊಳಿಸಿತು.

ಜಿಲ್ಲೆಯಲ್ಲಿ ಈವರೆಗೆ 16 ಜನರಲ್ಲಿ ಕೋವಿಡ್‌ ಪತ್ತೆಯಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ಸೋಂಕಿತರ ಪೈಕಿ ಎಂಟು ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಪ್ರತ್ಯೇಕ ಕ್ವಾರಂಟೈನ್‌ನಲ್ಲಿದ್ದಾರೆ. ಆರು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಹಾಯಕ್ಕೆ ನೋಡಲ್‌ ಅಧಿಕಾರಿ ಸಂಪರ್ಕಿಸಿ

ನಗರದಲ್ಲಿ ಮೇ 3ರ ವರೆಗೆ ಸೀಲ್‌ಡೌನ್ ಜಾರಿಯಲ್ಲಿರುವ ಸಾಧ್ಯತೆ ಇದ್ದು, ಜನರು ಈ ಅವಧಿಯಲ್ಲಿ ತಮಗೆ ಯಾವುದೇ ಸಹಾಯ ಬೇಕಾದರೂ ತಮ್ಮ ವಾರ್ಡ್‌ನ ನೋಡಲ್‌ ಅಧಿಕಾರಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಲಿ ಅಥವಾ ನೆರವು ಪಡೆಯಬಹುದು.

ವಾರ್ಡ್‌ವಾರು ನೋಡಲ್ ಅಧಿಕಾರಿಗಳ ಮಾಹಿತಿ
ವಾರ್ಡ್‌ ಅಧಿಕಾರಿ ಮೊಬೈಲ್ ಸಂಖ್ಯೆ
1 ಶರತ್ 98443111199

2 ಮನೋಹರ್ 9481531566

3 ಹೇಮಂತ್ 9986872959

4 ವೆಂಕಟಾಚಲಪತಿ 9448557509

5 ಮಂಜುನಾಥ್ 9480760444

6 ಚಂದ್ರಕುಮಾರ್ 9342215567

7 ಜಿ.ಆರ್.ನಾಗರಾಜ್ 8618292335

8 ಕೃಷ್ಣೇಗೌಡ 9448287365

9 ಡಿ.ಜಿ.ಕಿರಣ್ 9282521601

10 ಪ್ರವೀಣ್‌ ಚಂದ್ರ 8095822521

11 ಶ್ರೀನಿವಾಸ್ 9901215843

12 ವಾದಿರಾಜ್ 9449961249

13 ರವಿಕುಮಾರ್ 9449035258

14 ಮಂಜುನಾಥ್ 8088340344

15 ಶಿವಮೂರ್ತಿ 9731382547

16 ಲಕ್ಷ್ಮೀಪತಿ ರೆಡ್ಡಿ 9480767883

17 ಸಂತೋಷ್ 9483238088

18 ಮಹೇಶ್ವರಪ್ಪ 9972084920

19 ಕೆ.ನಾಗರಾಜ್ 9945238342

20 ಮುನಿರಾಜು 8746923210

21 ಜಿ.ಎಂ.ಸಿದ್ಧೇಶ್ 9342959690

22 ನರಸಿಂಹಮೂರ್ತಿ 9008565882

23 ರಾಮಯ್ಯ 9901463462

24 ಎನ್.ಮಂಜುನಾಥ್ 9535577555

25 ಆರ್.ನರಸಿಂಹಮೂರ್ತಿ 8971185080

26 ಎ.ಶಾಂತರಾಜು 8618347934

27 ನಾಗರಾಜ್ 7411251044

28 ಅನಿಲ್‌ಕುಮಾರ್ 9902712222

29 ಬಾಲರಾಜ್ 9482521601

30 ಲಕ್ಷ್ಮೀನರಸೇಗೌಡ 9886228409

31 ಶಂಕರಪ್ಪ 8453237374

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT