ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್‌ ಕೇಂದ್ರಕ್ಕೆ ವಿರೋಧ

Last Updated 9 ಏಪ್ರಿಲ್ 2021, 2:22 IST
ಅಕ್ಷರ ಗಾತ್ರ

ಚಿಂತಾಮಣಿ: ಚಿಂತಾಮಣಿ ಹೊಸಕೋಟೆ ರಾಜ್ಯ ಹೆದ್ದಾರಿಯಲ್ಲಿ ಈಗಾಗಲೇಇರುವ 2 ಟೋಲ್ ಸಂಗ್ರಹ ಕೇಂದ್ರಗಳ ಜತೆಗೆ ಮತ್ತೊಂದು ಟೋಲ್ ಸಂಗ್ರಹಣೆ ಕೇಂದ್ರ ತೆರೆಯುವುದನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆಗೆ ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳು ಸಿದ್ಧತೆ ನಡೆಸಿದ್ದಾರೆ.

ಯುವಶಕ್ತಿ ಸಂಘಟನೆಯಿಂದ ಟೋಲ್ ಕೇಂದ್ರದ ಸ್ಥಾಪನೆ ಕುರಿತು ಮಾಹಿತಿಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮಾಹಿತಿಗಳು ದೊರೆತ ನಂತರ ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲಾಗುತ್ತದೆ ಎಂದು ಯುವಶಕ್ತಿ ಪ್ರಕಟಣೆಯಲ್ಲಿ ತಿಳಿಸಿದೆ.

ಚಿಂತಾಮಣಿ-ಹೊಸಕೋಟೆ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ಹಾಗೂ ತಿಂಗಳಿನಲ್ಲಿ ಸಂಚರಿಸುವ ಸರಾಸರಿ ವಾಹನಗಳ ಸಂಖ್ಯೆ, ಟೋಲ್ ವಿಧಿಸುವ ಮಾರ್ಗಸೂಚಿಗಳ ವಿವರ, 2 ಟೋಲ್ ಕೇಂದ್ರಗಳ ನಡುವೆ ಇರಬೇಕಾದ ಅಂತರ. ಪ್ರಸ್ತುತ ರಸ್ತೆಯಲ್ಲಿರುವ ಉಬ್ಬುಗಳ ಸಂಖ್ಯೆ. ದ್ವಿಪಥದಿಂದ ಚತುಷ್ಪದ ರಸ್ತೆಯನ್ನಾಗಿಸುವ ಯೋಜನೆ ಬಗ್ಗೆ ಮಾಹಿತಿ ಕೋರಿ ಯುವಶಕ್ತಿಯ ಪರವಾಗಿ ರಾಜ್ಯ ಜಂಟಿ ಕಾರ್ಯದರ್ಶಿ ವಿನೋದ್ ಸಿ.ರೆಡ್ಡಿ ಅರ್ಜಿ ಸಲ್ಲಿಸಿದ್ದಾರೆ.

ಹೊಸಕೋಟೆಯ ಬಳಿ ಟೋಲ್ ಕೇಂದ್ರವಿತ್ತು. ನಂತರ ಬೀಚಗೊಂಡನಹಳ್ಳಿ ಸಮೀಪದಲ್ಲಿ 2 ನೇ ಟೋಲ್ ಸಂಗ್ರಹಣೆ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಆಗಲೇ ಟೋಲ್ ವಿರೋಧಿಸಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಪ್ರಸ್ತುತ ಭೀಕನಹಳ್ಳಿ ಬಳಿ ಟೋಲ್ ಸಂಗ್ರಹಣೆ ಕೇಂದ್ರ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ. ಹೊಸಕೋಟೆಯಿಂದ ಭೀಮಕನ ಹಳ್ಳಿಗೆ ಕೇವಲ 32 ಕಿ.ಮೀ ದೂರ ವಿದೆ ಎಂದು ಪ್ರಕಟಣೆ ತಿಳಿಸಿದೆ.

ಭೀಮಕಹಳ್ಳಿಯಿಂದ ಬೀಚಗೊಂಡನಹಳ್ಳಿಗೂ 35 ಕಿ.ಮೀ ಆಗಬಹುದು. 32 ಕಿ.ಮೀ ಅಂತರಕ್ಕೆ ಒಂದೊಂದು ಟೋಲ್ ಸಂಗ್ರಹಣೆ ಕೇಂದ್ರ ತೆರೆದು ಜನರನ್ನು ಲೂಟಿ ಮಾಡಲು ಸಿದ್ಧತೆ ನಡೆಯುತ್ತದೆ. ಸಾಕಷ್ಟು ವರ್ಷಗಳಿಂದ ಟೋಲ್ ಶುಲ್ಕ ಸಂಗ್ರಹಿಸುತ್ತಿದ್ದರೂ ರಸ್ತೆಯಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಟೀಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT