ಚಿಕ್ಕಬಳ್ಳಾಪುರ: ಆಚರಣೆಗಳಿಂದ ಪರಂಪರೆಯ ರಕ್ಷಣೆ ಸಾಧ್ಯ. ಸಂಸ್ಕೃತಿ ಮತ್ತು ಪರಂಪರೆ ಉಳಿಸುವಲ್ಲಿ ಆಚರಣೆ ಮತ್ತು ಶಿಕ್ಷಣ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಮಧುಸೂದನ ಸಾಯಿ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ಆರಂಭವಾದ ದಸರಾ ಮಹೋತ್ಸವದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಪಾರಮಾರ್ಥಿಕ ಮತ್ತು ಲೌಕಿಕ ಶಿಕ್ಷಣವನ್ನು ಒಟ್ಟಿಗೆ ನೀಡುವುದು ಭಾರತೀಯ ಶಿಕ್ಷಣ ಪರಂಪರೆಯ ವೈಶಿಷ್ಟ್ಯ. ಆಚರಣೆಗಳು ಶಿಕ್ಷಣದ ಪ್ರಾಯೋಗಿಕ ಮಹತ್ವವನ್ನು ಸಾರುತ್ತದೆ. ಭಾರತದ ಸನಾತನ ಪರಂಪರೆಯು ಅನೇಕ ಋಷಿಗಳು, ಮುನಿಗಳ ಚಿಂತನೆ ಹಾಗೂ ಮಂತ್ರಗಳ ಸಾರಸಂಗ್ರಹಗಳಿಂದ ರೂಪಿತವಾಗಿವೆ ಎಂದು ಹೇಳಿದರು.

ಧಾರ್ಮಿಕ ಆಚರಣೆಗಳು ಶಾಂತಿ ಮತ್ತು ನೆಮ್ಮದಿ ನೀಡುತ್ತವೆ. ಮನಸ್ಸನ್ನು ಉಲ್ಲಾಸದಿಂದ ಇರಿಸುತ್ತವೆ ಎಂದು ಹೇಳಿದರು.

ದಸರಾ ಮಹೋತ್ಸವದ ಅಂಗವಾಗಿ ಸಹಸ್ರ ಮೋದಕ ಹೋಮ, ಗಣಪತಿ ಹೋಮ, ನವಗ್ರಹ ಹೋಮ ಮತ್ತು ಶನಿಶಾಂತಿ ಹೋಮಗಳು ನೆರವೇರಿದವು. ಶೃಂಗೇರಿ ಶಾರದಾ ಪೀಠದ ಋತ್ವಿಜರು ಹೋಮಗಳನ್ನು ನೆರವೇರಿಸಿ, ಅವುಗಳ ಮಹತ್ವ ವಿವರಿಸಿದರು.

ನವದುರ್ಗೆಯರಲ್ಲಿ ಪ್ರಥಮವಾಗಿ ಅವತರಿಸಿದ ಮಾತೆ ಶೈಲಪುತ್ರಿಯನ್ನು ಆರಾಧಿಸಲಾಯಿತು. ಜಗತ್ತಿನಲ್ಲಿ ಅಧರ್ಮವನ್ನು ಮಟ್ಟ ಹಾಕಿ, ಶಾಂತಿಯನ್ನು ಸ್ಥಾಪಿಸಿ, ಸಮಾಧಾನ ಸಮೃದ್ಧಿಯನ್ನು ನೆಲೆಗೊಳಿಸುವುದೇ ಮಾತೆಯ ಅವತಾರ ಉದ್ದೇಶವಾಗಿದೆ. ಆಕೆಯನ್ನು ಜಗತ್ ಕಲ್ಯಾಣಕ್ಕಾಗಿ ಆರಾಧಿಸಲಾಗುವುದು ಎಂಬುದನ್ನು ಉಪನ್ಯಾಸದಲ್ಲಿ ವಿವರಿಸಲಾಯಿತು.

ಹಿಂದಿನ ವರ್ಷಗಳಂತೆ ಈ ಬಾರಿಯೂ ದುರ್ಗಾಮಾತೆಯ ಪರಿವಾರವನ್ನು ಪಶ್ಚಿಮ ಬಂಗಾಳದಿಂದ ತರಿಸಲಾಗಿತ್ತು. ವಿಶೇಷವಾದ ವೇದಿಕೆಯಲ್ಲಿ ರಾಜಗುರು ಛತ್ರ ಚಾಮರ ದೀಪದ ನರ್ತನ ಸಂಗೀತಗಳಿಂದ ಪೂಜಿಸಿ ದುರ್ಗಾಮಾತೆಗೆ ಭಕ್ತಿ ಸಮರ್ಪಿಸಲಾಯಿತು.

ಭೀಮನಕಟ್ಟೆ ಮಠದ ರಾಘವೇಂದ್ರ ತೀರ್ಥ ಸ್ವಾಮೀಜಿ, ಎಸ್‌ವಿವೈಎಎಸ್‌ಎ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ರಾಮಚಂದ್ರ ಭಟ್ ಕೋಟೆಮನೆ, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎನ್. ನರಸಿಂಹಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.