ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರದತ್ತ ಸುಳಿಯದ ಬಿರುಸು ಮಳೆ

ಮೇ 17ರವರೆಗೆ ವಾಡಿಕೆಗಿಂತ ಕಡಿಮೆಯಾದ ಮಳೆ
Published : 18 ಮೇ 2024, 8:06 IST
Last Updated : 18 ಮೇ 2024, 8:06 IST
ಫಾಲೋ ಮಾಡಿ
Comments
ಎರಡು ವರ್ಷಗಳ ಹಿಂದೆ ಅಬ್ಬರಿಸಿದ್ದ ಮಳೆ
2021 ಮತ್ತು 22ನೇ ಸಾಲಿನ ಈ ಅವಧಿಯಲ್ಲಿ ರಾಜ್ಯದ ಜನರು ಚಿಕ್ಕಬಳ್ಳಾಪುರದತ್ತ ತಿರುಗಿ ನೋಡುವಷ್ಟು ಮಳೆ ಸುರಿದಿತ್ತು. ಬಯಲು ಸೀಮೆಯ ಚಿಕ್ಕಬಳ್ಳಾಪುರ ಮಲೆನಾಡಂತೆ ಕಂಡಿತ್ತು. ಜಕ್ಕಲಮಡುಗು ಜಲಾಶಯ, ಶ್ರೀನಿವಾಸ ಸಾಗರ, ಪರಗೋಡು ಜಲಾಶಯ ಹೀಗೆ ಜಿಲ್ಲೆಯ ಜಲಾಶಯಗಳು ನೀರಿನಿಂದ ತುಂಬಿದ್ದವು. ನಂದಿಗಿರಿಧಾಮದ ಅಲ್ಲಲ್ಲಿ ಝರಿಗಳು ಸಹ ಸೃಷ್ಟಿ ಆಗಿದ್ದವು.  2023ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಮುಂಗಾರು ಮಳೆ ದುರ್ಬಲ ಎನಿಸಿತ್ತು. 2022 ಮತ್ತು 2023ರ ನಡುವಿನ ಮಳೆ ಪ್ರಮಾಣವನ್ನು ತುಲನೆ ಮಾಡಿದರೆ 2023ನೇ ಸಾಲಿನಲ್ಲಿ –20.3ರಷ್ಟು ಶೇಕಡಾವಾರು ವ್ಯತ್ಯಾಸವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT