ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರತ್ನಂ ಕೊಡುಗೆ ಅನನ್ಯ

Last Updated 21 ಡಿಸೆಂಬರ್ 2020, 4:13 IST
ಅಕ್ಷರ ಗಾತ್ರ

ಚಿಂತಾಮಣಿ: ‘ಜಿ.ಪಿ. ರಾಜರತ್ನಂ ಸಾಹಿತಿ ಮಾತ್ರವಾಗಿರದೆ, ಸಾಹಿತ್ಯದ ಪ್ರಚಾರಕರೂ ಆಗಿದ್ದರು’ ಎಂದು ಶಿಕ್ಷಕ ಜಿ.ವಿ. ರಾಮಕೃಷ್ಣ ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಬಳಗ ನಗರದಲ್ಲಿ ಆಯೋಜಿಸಿದ್ದ ತಿಂಗಳ ಕವಿ ನೆನಪು ಕಾರ್ಯಕ್ರಮದಲ್ಲಿ ಜಿ.ಪಿ. ರಾಜರತ್ನಂ ಅವರ ಬದುಕು– ಬರಹ ಕುರಿತು ಉಪನ್ಯಾಸ ನೀಡಿದರು.

ರಾಜರತ್ನಂ ತಾವು ರಚಿಸಿದ ಕೃತಿಗಳ ಜತೆಗೆ ಇತರೇ ಸಾಹಿತಿಗಳ ಕೃತಿಗಳನ್ನು ಸಹ ಹೆಗಲ ಮೇಲೆ ಹೊತ್ತು ಜನಸಾಮಾನ್ಯರಿಗೆ ಮುಟ್ಟಿಸಿದ ಕವಿ. ಅವರು ಸಾಹಿತ್ಯದ ಸೃಷ್ಟಿಯ ಜತೆಗೆ ಸಾಹಿತ್ಯದ ಪ್ರಚಾರವನ್ನು ಮಾಡಿ ಸಾಹಿತ್ಯದ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಳಗದ ಅಧ್ಯಕ್ಷ ನಂಜಪ್ಪ ರೆಡ್ಡಿ ಮಾತನಾಡಿದರು.ಸಾಹಿತ್ಯಾಭಿಮಾನಿ ಗಳಾದ ಶಿ. ಮಂಜುನಾಥ್, ಎಸ್.ಎಫ್.ಎಸ್. ಸುರೇಶ್, ಟಿ.ಎಂ. ಈಶ್ವರಸಿಂಗ್, ಕೆ.ಎನ್. ಅಕ್ರಂ ಪಾಷಾ, ಎಚ್.ಎಸ್. ಅಶೋಕ್, ಕನ್ನಡ ರಮೇಶ್, ಎಸ್. ವಾಲಿರೆಡ್ಡಿ, ಕೆ.ಎಸ್. ನೂರ್‌ಉಲ್ಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT