ಚಿಂತಾಮಣಿ: ರಾಜ್ಯದಲ್ಲಿ ರೈತರಿಂದ ಹಾಲು ಖರೀದಿಸುವ ದರವನ್ನು ಕಡಿಮೆ ಮಾಡಿರುವುದರಿಂದ ಕರ್ನಾಟಕ ಹಾಲು ಮಹಾಮಂಡಳಿಯು ಪಶು ಆಹಾರ (ಫೀಡ್) ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ವೈ.ವಿ.ಅಶ್ವತ್ಥ ನಾರಾಯಣಬಾಬು ಒತ್ತಾಯಿಸಿದರು.
ನಗರದ ಹಾಲು ಒಕ್ಕೂಟದ ಶಿಬಿರದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರಿಗೆ ಹಸುಗಳ ವಿಮಾ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ಕೋವಿಡ್-19ನಿಂದ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಜನ ಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ. ರಾಜ್ಯದ ಎಲ್ಲ ಹಾಲು ಒಕ್ಕೂಟಗಳು ಖರೀದಿ ದರವನ್ನುಕಡಿಮೆ ಮಾಡಿವೆ. ಆದರೆ, ಕರ್ನಾಟಕ ಹಾಲು ಮಹಾಮಂಡಳಿಯು ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡದೆ ರೈತರ ಶಾಪಕ್ಕೆ ಗುರಿಯಾಗುತ್ತಿದೆ. ಹಾಲಿನ ದರ ಕಡಿಮೆ ಆಗಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ.
ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರು ತಮ್ಮ ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಆಕಸ್ಮಿಕವಾಗಿ ಮೃತಪಟ್ಟರೆ ಮತ್ತೆ ಹಸು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ಅತ್ಯಂತ ಕಡಿಮೆ ಕಂತಿನಲ್ಲಿ ವಿಮೆ ಮಾಡಿಸಬಹುದು ಎಂದರು.
22 ಜನ ಉತ್ಪಾದಕ ಫಲಾನುಭವಿಗಳಿಗೆ ₹13 ಲಕ್ಷ ಮೊತ್ತವನ್ನು ಚೆಕ್ ಮೂಲಕ ವಿತರಿಸಲಾಯಿತು. ಶಿಬಿರದ ಸಹಾಯಕ ನಿರ್ದೇಶಕ ಎ.ವಿ.ಶಂಕರರೆಡ್ಡಿ, ಪ್ರಾಣಿ ಪ್ರಯೋಗಾಲಯದ ಮುಖ್ಯಸ್ಥ ಡಾ. ರಾಘವೇಂದ್ರ, ವಿಸ್ತರಣಾಧಿಕಾರಿಗಳಾದ ಪಿ.ವೆಂಕಟರವಣ, ವೆಂಕಟೇಶಮೂರ್ತಿ, ಎಂ.ಎಸ್. ನಾರಾಯಣಸ್ವಾಮಿ, ಶಂಕರ್, ಎನ್.ನಾರಾಯಣಸ್ವಾಮಿ, ಕೆ.ಪ್ರೇಮಕಿರಣ್ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.