ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಕಸಾಪ ಸಮ್ಮೇಳನದ ಲಾಂಛನ ಬಿಡುಗಡೆ

Last Updated 17 ಫೆಬ್ರುವರಿ 2021, 3:01 IST
ಅಕ್ಷರ ಗಾತ್ರ

ಗೌರಿಬಿದನೂರು: ಕನ್ನಡ ನಾಡು, ನುಡಿ, ನೆಲ, ಜಲವನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಮಂಚೇನಹಳ್ಳಿಯಲ್ಲಿ ನಡೆಯುತ್ತಿರುವ ಪ್ರಥಮ‌ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸು ಕಂಡು‌ ಜನತೆ ಸಾಹಿತ್ಯ ಮತ್ತು‌ ಸಾಂಸ್ಕೃತಿಕ ಸಂಭ್ರಮವನ್ನು ‌ಮೆರೆಯುವಂತಾಗಲಿ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಪ್ರಥಮ ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಜಿಲ್ಲೆಯ ‌ಅರೆಮಲೆನಾಡು ಎಂಬ ಖ್ಯಾತಿಗೆ ಪಾತ್ರವಾಗಿದ್ದು, ನಾಗರಿಕತೆ ಮತ್ತು ಸಾಂಸ್ಕೃತಿಕ ವೈಭವದ ಜತೆಗೆ ಇಲ್ಲಿನ ಭೂ ಮತ್ತು ಜಲ ಸಂಪತ್ತಿನಿಂದ ‌ಜನತೆ ನೆಮ್ಮದಿಯಿಂದ ಬದುಕುವಂತಾಗಿದ್ದಾರೆ‌. ನನ್ನ ನೆಚ್ಚಿನ ಮಂಚೇನಹಳ್ಳಿಯಲ್ಲಿ ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಇಡೀ ರಾಜ್ಯಕ್ಕೆ ಮಾದರಿಯಾಗುವಂತಿರಲಿ. ಎಲ್ಲ ಆಯಾಮಗಳನ್ನು ಒಳಗೊಂಡಂತೆ ಒಂದು ಸುಂದರ ಮತ್ತು ಸುಸಂಸ್ಕೃತವಾದ ವೇದಿಕೆಯಲ್ಲಿ ‌ನಾಡಿನ ಗತವೈಭವವನ್ನು ಮೆರೆಯುವಂತಿರಲಿ. ಎಲ್ಲ ಸಾಹಿತ್ಯಾಭಿಮಾನಿಗಳು ಮತ್ತು ಯುವ ಕವಿಗಳಿಗೆ ಸೂಕ್ತ ವೇದಿಕೆ ದೊರೆತು ಅವರಲ್ಲಿನ ಕಲೆ ಮತ್ತು ಪ್ರತಿಭೆ ಅನಾವರಣಗೊಳ್ಳಲಿ ಎಂಬುದೇ ನಮ್ಮ ಆಶಯವಾಗಿದೆ’ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಆರ್.ಜಿ. ಜನಾರ್ಧನಮೂರ್ತಿ ಸಾಹಿತ್ಯಾಸಕ್ತರಾದ ಕೆ.ಪ್ರಭಾನಾರಾಯಣಗೌಡ, ಎನ್.ಡಿ.ವೆಂಕಟಪ್ಪ, ಜಿ.ಎನ್.ಗಂಗಾಧರಯ್ಯ, ಎಚ್.ಎಸ್.ನಾರಾಯಣಪ್ಪ, ಕೆ.ಸಿ.ಶಂಕರ್, ಶಿವಕುಮಾರ್, ಕಿರಣ್ ಕುಮಾರ್, ಜಿ.ಆರ್.ರಾಜಶೇಖರ್, ಸಣ್ಣಕ್ಕಿ ವೆಂಕಟರಮಣಪ್ಪ, ವೆಂಕಟಾಚಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT