ಭಾನುವಾರ, ನವೆಂಬರ್ 28, 2021
22 °C

‘ಕನ್ನಡ ಸಾಹಿತ್ಯ ಬೆಳೆಸುವುದು ಎಲ್ಲರ ಜವಾಬ್ದಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ನಗರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯಾಭಿಮಾನಿಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ.ಕೋಡಿರಂಗಪ್ಪ ಅವರಿಗೆ ಕೃತಜ್ಞತಾ ಸಮಾರಂಭ ಆಯೋಜಿಸಲಾಗಿತ್ತು. 

ಕೋಡಿರಂಗಪ್ಪ ‌ಮಾತನಾಡಿ, ಸಾಹಿತ್ಯದ ನೆಲೆಯಲ್ಲಿ ನಾಡು, ನುಡಿ, ನೆಲ, ಜಲ ಸಂರಕ್ಷಣೆ ಮಾಡುವ ಕಾರ್ಯವು ನಿರಂತರವಾಗಿ ‌ನಡೆಯುವಂತೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಸಮಾಜದಲ್ಲಿನ ಕನಿಷ್ಠ ಮಟ್ಟದ ವ್ಯಕ್ತಿಗೆ ಸಾಹಿತ್ಯದ ಪರಿಕಲ್ಪನೆ ಬೆಳೆಸುವ ಗುರಿ ಎಲ್ಲರದ್ದಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಅವಿರತವಾಗಿ ಶ್ರಮಿಸುವ ಮೂಲಕ ಇಡೀ ಜಿಲ್ಲೆಯಾದ್ಯಂತ ಸಾಹಿತ್ಯದ ಕಂಪನ್ನು ಬೆಳೆಸುವಂತೆ ಮಾಡಬೇಕಾಗಿದೆ ಎಂದರು.

ಸಾಹಿತ್ಯಾಭಿಮಾನಿ ಟಿ. ಅಶ್ವತ್ಥಪ್ಪ ಮಾತನಾಡಿ, ಜಿಲ್ಲೆಯ ಸಾಹಿತ್ಯ ಪರಿಷತ್ತಿಗೆ ಕೋಡಿರಂಗಪ್ಪ ಸಾರಥ್ಯ ವಹಿಸಿರುವುದು ಸಾಹಿತ್ಯ ಕ್ಷೇತ್ರಕ್ಕೆ ಗೌರವ ತಂದಿದೆ ಎಂದರು.

ಸಾಹಿತ್ಯಾಭಿಮಾನಿಗಳಾದ ವೈ.ಎಲ್. ಹನುಮಂತರಾವ್, ಅಮೃತ್ ಕುಮಾರ್, ವೀರಣ್ಣ, ಆರ್. ಅಶೋಕ್ ಕುಮಾರ್, ಸಿ.ಆರ್. ನರಸಿಂಹಮೂರ್ತಿ, ಡಿ.ಎನ್. ವೆಂಕಟರೆಡ್ಡಿ, ವಿ. ರವೀಂದ್ರನಾಥ್, ಆರ್.ಜಿ. ಜನಾರ್ದನಮೂರ್ತಿ, ಡಿ.ಜೆ. ಚಂದ್ರಮೋಹನ್, ವೇಣು, ಕೆ. ಪ್ರಭಾ ನಾರಾಯಣಗೌಡ, ಎಚ್.ಎಲ್. ವೆಂಕಟೇಶ್, ಕೆ.ವಿ. ಪ್ರಕಾಶ್, ಅನಂತರಾಜು, ಟಿ. ನಂಜುಂಡಪ್ಪ, ಗೌರೀಶ್, ಗಿರಿಧರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.