ಶುಕ್ರವಾರ, ಜೂಲೈ 3, 2020
21 °C

ಚಿಂತಾಮಣಿ | ಆರ್‌ಎಸ್‌ಎಸ್‌ ಮುಖಂಡ ವೆಂಕಟರಮಣಸ್ವಾಮಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಆರ್‌ಎಸ್‌ಎಸ್ ಹಿರಿಯ ನಾಯಕ ನಾ.ಮಾ. ವೆಂಕಟರಮಣಸ್ವಾಮಿ (86) ಮಂಗಳವಾರ ನಗರದ ಎನ್.ಆರ್. ಬಡಾವಣೆಯಲ್ಲಿನ ಅವರ ನಿವಾಸದಲ್ಲಿ ನಿಧನರಾದರು.

ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಸಂಘ ಪರಿವಾರದಲ್ಲಿ ಸಕ್ರಿಯವಾಗಿದ್ದ ಇವರು ಜಿಲ್ಲಾ ಸಂಚಾಲಕರಾಗಿ ದಶಕಗಳ ಕಾಲ ಕೆಲಸ ಮಾಡಿದ್ದರು. ಹಿಂದೂ ಜಾಗರಣೆ ವೇದಿಕೆ, ಕನ್ಯಕಾ ಪರಮೇಶ್ವರಿ ಸಹಕಾರ ಸಂಘದಲ್ಲಿ 10 ವರ್ಷ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಜ್ಞಾನವಾಹಿನಿ ವಿದ್ಯಾಸಂಸ್ಥೆಯಲ್ಲಿ 25 ವರ್ಷ ಮಹಾ ಪೋಷಕರಾಗಿ ತೊಡಗಿಕೊಂಡಿದ್ದರು.

ಇವರಿಗೆ ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.