ಚಿಂತಾಮಣಿ: ಶ್ರೀಗಂಧದ ಕಳ್ಳತನ ಪ್ರಕರಣ ಭೇದಿಸಿರುವ ತಾಲ್ಲೂಕಿನ ಬಟ್ಲಹಳ್ಳಿ ಠಾಣೆ ಪೊಲೀಸರು, ಎಂಟು ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಬಂಧಿತರದಿಂದ ₹3.20 ಲಕ್ಷ ಮೌಲ್ಯದ 32 ಕೆ.ಜಿ. ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರನ್ನು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಹೊಸಹಳ್ಳಿಯ ತೀರ್ಥಕುಮಾರ್ ಮತ್ತು ಮೂರ್ತಿ, ಮಾಯಸಂದ್ರದ ಗೌಸ್ ಪಾಷಾ ಮತ್ತು ಅಪ್ಸರ್ ಪಾಷಾ, ಮಾಯಸಂದ್ರ ತಾಲ್ಲೂಕಿನ ಬ್ಯಾಟರಹಳ್ಳಿಯ ಮನೋಜ್, ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ಕರಿಮಾರನಹಳ್ಳಿಯ ಭರತ್ ಮತ್ತು ಶಿವ, ವಿಜಯನಗರದ ಏಜಾಜ್ ಬಂಧಿತರು.

ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಟ್ಲಹಳ್ಳಿ ಪಿಎಸ್ಐ ಶಿವಕುಮಾರ್ ಸಿಬ್ಬಂದಿ ಮಂಜುನಾಥ್, ವೆಂಕಟೇಶ್, ಪ್ರವೀಣ್ ಕುಮಾರ್, ನವೀನ್ ಕುಮಾರ್ ತಂಡದಲ್ಲಿದ್ದರು.

ನಲ್ಲಗುಟ್ಟಹಳ್ಳಿ, ಬೊಮ್ಮೆಪಲ್ಲಿ ಗ್ರಾಮಗಳಲ್ಲಿ ಶ್ರೀಗಂಧದ ಮರಗಳ ತೋಟದಲ್ಲಿ ಶ್ರೀಗಂಧದ ಮರಗಳನ್ನು ಬುಡ ಸಹಿತ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಜುಲೈ 22 ಮತ್ತು 24ರಂದು ದೂರು ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.