ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಅವಕಾಶಗಳಿಗೆ ಕೌಶಲ ಅಗತ್ಯ

Last Updated 16 ಅಕ್ಟೋಬರ್ 2019, 15:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೌಶಲ ತರಬೇತಿ ಪಡೆದ ಪ್ರತಿಯೊಬ್ಬ ತರಬೇತಿದಾರನು ಉದ್ಯೋಗವನ್ನು ಪಡೆದು ಸ್ವಾವಲಂಬನೆ ಜೀವನ ನಡೆಸಿ ಸಶಕ್ತರಾಗಬೇಕು’ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ನಗರ ಐ-ಸಾಫ್‍ಟೆಕ್ ಕಂಪ್ಯೂಟರ್ ಕೇಂದ್ರದಲ್ಲಿ ಜಿಲ್ಲಾಡಳಿತ, ಕೌಶಲ ಅಭಿವೃದ್ಧಿ ಕಚೇರಿ ಹಾಗೂ ದಕ್ಷ್ಯಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಯುವಕ, ಯುವತಿಯರು ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಉದ್ಯೋಗ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆಧುನಿಕ ಸಮಾಜದಲ್ಲಿ ಕೌಶಲ ಉಳ್ಳವರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ಕೌಶಲ ತರಬೇತಿ ಪಡೆಯಬೇಕು’ ಎಂದು ಹೇಳಿದರು.

‘ಮಹಿಳೆಯರು ಸದೃಢವಾದ ಜೀವನ ನಡೆಸಲು ಕೌಶಲ ತರಬೇತಿ ಮುಖ್ಯ. ಇದರಿಂದ ಅವರು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೌಶಲ ತರಬೇತಿ ಪಡೆದುಕೊಳ್ಳುವಷ್ಟೇ ಸೀಮಿತವಾಗಬಾರದು. ಕುಶಲ ವ್ಯಕ್ತಿಗಳಿಗೆ ಶೇ 100ರಷ್ಟು ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟು ನಿರುದ್ಯೋಗವನ್ನು ಹೋಗಲಾಡಿಸಬೇಕು’ ಎಂದರು.

‘ದಕ್ಷ್ಯಾ ಅಕಾಡೆಮಿಯು ನಿರುದ್ಯೋಗವನ್ನು ಹೋಗಲಾಡಿಸುವ ಉದ್ದೇಶದಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಕೌಶಲ ರಹಿತ 16 ರಿಂದ 35 ವರ್ಷದ ಯುವಕ-ಯುವತಿಯರಿಗೆ 3 ತಿಂಗಳ ಕಾಲ ಟೈಲರಿಂಗ್, ಡಾಟಾ ಎಂಟ್ರಿ ಆಪರೇಟರ್, ಸಿಸಿ ಟಿವಿ ಅಳವಡಿಕೆ, ಬ್ಯೂಟೀಷಿಯನ್ ತರಬೇತಿ, ರೆಡಿಯೋ ಮತ್ತು ಟಿವಿ ರಿಪೇರಿ ತರಬೇತಿ, ವೆಲ್ಡಿಂಗ್ ತರಬೇತಿಯನ್ನು ಉಚಿತವಾಗಿ ನೀಡಿ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಉದ್ಯೋಗಾಧಿಕಾರಿ ಪ್ರಸಾದ್ ಎಂ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ನಲ್ಮ್ ಸಂಸ್ಥೆಯ ವ್ಯವಸ್ಥಾಪಕರಾದ ವೆಂಕಟಾಚಲಪತಿ, ದಕ್ಷ್ಯಾ ಅಕಾಡೆಮಿಯ ಸಂಸ್ಥಾಪಕರಾದ ಗೋವಿಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT