ಗುರುವಾರ , ಆಗಸ್ಟ್ 5, 2021
28 °C

ತಂದೆ ಹತ್ಯೆಗೇ ಸುಪಾರಿ‌ ನೀಡಿದ್ದ ಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕಿನ ಜೋಡಿಬಿಸಲಹಳ್ಳಿಯಲ್ಲಿ ಜೂನ್ 14ರಂದು‌ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿ.ಎನ್. ಶ್ರೀನಿವಾಸಮೂರ್ತಿ (59) ಕೊಲೆಯಾದವರು.

ಅವರ ಹಿರಿಯ ‌ಮಗನಾದ ರೋಹಿತ್ ತನ್ನ ಸ್ನೇಹಿತರಾದ ರಂಗನಾಥ್ ಹಾಗೂ ಶ್ರಾವಂಡಹಳ್ಳಿಯ ರವಿಕುಮಾರ್‌ಗೆ ತನ್ನ ತಂದೆಯನ್ನು ಹತ್ಯೆ ಮಾಡುವಂತೆ ₹ 1 ಲಕ್ಷ ಸುಪಾರಿ‌ ನೀಡಿದ್ದ. ಬಳಿಕ ಈ ಮೂವರು ಗ್ರಾಮದ ಸರ್ಕಾರಿ‌ ಶಾಲಾ ಆವರಣದಲ್ಲಿ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಶ್ರೀನಿವಾಸಮೂರ್ತಿ ಎಂದಿನಂತೆ ರೇಷ್ಮೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಆಗ ರಂಗನಾಥ್ ‌ಮತ್ತು ರವಿಕುಮಾರ್ ಹೊಂಚು ಹಾಕಿ ಕಬ್ಬಿಣದ ರಾಡ್‌ನಿಂದ ಅವರ ತಲೆಗೆ ಹೊಡೆದು‌ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮಾಂತರ ‌ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು