ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರಹಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಬೀದಿ ನಾಯಿಗಳು ಕುರಿದೊಡ್ಡಿಯ ಮೇಲೆ ದಾಳಿ ನಡೆಸಿ 11 ಕುರಿಗಳನ್ನು ಬಲಿ ತೆಗೆದುಕೊಂಡಿವೆ. 10 ಕುರಿಗಳಿಗೆ ಕಚ್ಚಿ
ಗಾಯಗೊಳಿಸಿವೆ.

ಗ್ರಾಮದ ಚೌಡಪ್ಪ ಅವರ ಜಾಗದಲ್ಲಿ ರೈತ ಸತ್ಯನಾರಾಯಣ ಸುಮಾರು 50ಕ್ಕಿಂತ ಹೆಚ್ಚು ಕುರಿ ಸಾಕುತ್ತಿದ್ದಾರೆ. ರಾತ್ರಿ 2ಗಂಟೆ ಸಮಯದಲ್ಲಿ ಕುರಿಗಳ ಶೆಡ್ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದು 11 ಕುರಿಗಳು ಸಾವನ್ನಪ್ಪಿವೆ. ಎಂಟು ಕುರಿಗಳಿಗೆ ಹೆಚ್ಚು ಗಾಯಗಳಾಗಿವೆ. ಪಶು ವೈದ್ಯ ಡಾ.ಅಮರನಾಥ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದರು.

ಕಂದಾಯ ಇಲಾಖೆ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುರಿಗಳು ಸಾವನ್ನಪ್ಪಿರುವ ಬಗ್ಗೆ ವರದಿ ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.