ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ| ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

Published 19 ಜುಲೈ 2023, 16:01 IST
Last Updated 19 ಜುಲೈ 2023, 16:01 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಗಡಿಗವಾರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಎಂಟನೇ ತರಗತಿ ವಿದ್ಯಾರ್ಥಿನಿ ತನುಶ್ರೀ(14) ಮೃತಪಟ್ಟ ವಿದ್ಯಾರ್ಥಿನಿ. ಈ ಕುರಿತು ... ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಸತಿ ಶಾಲೆಯಲ್ಲಿ ಮಂಗಳವಾರ ರಾತ್ರಿ ಎಂದಿನಂತೆ ಊಟ ಮಾಡಿ ವಿದ್ಯಾರ್ಥಿಗಳು ಮಲಗಿದ್ದರು. ಬುಧವಾರ ಬೆಳಿಗಿನ ಜಾವ 4.55ರ ಸುಮಾರಿಗೆ ಬೆಲ್ ಬಾರಿಸಿದ್ದು, ಎಲ್ಲ ವಿದ್ಯಾರ್ಥಿಗಳು ನಿದ್ದೆಯಿಂದ ಎದ್ದರು. ಆದರೆ, ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದ ತನುಶ್ರೀ ಮಾತ್ರ ಎದ್ದಿರಲಿಲ್ಲ. ಈ ವಿಚಾರವನ್ನು ಸಹಪಾಠಿಗಳು ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. 

ಈ ವೇಳೆ ಕೂಡಲೇ ವಸತಿ ಶಾಲೆಗೆ ಬಂದಿದ್ದ ಪ್ರಾಂಶುಪಾಲೆ ನಾಗರತ್ನಮ್ಮ, ಅಸ್ವಸ್ಥ ವಿದ್ಯಾರ್ಥಿನಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಅಷ್ಟೊತ್ತಿಗಾಗಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ ಎಂದು ತನುಶ್ರೀ ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲೆ, ‘ಓದು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತನುಶ್ರೀ ತುಂಬಾ ಚೂಟಿಯಾಗಿದ್ದಳು. ಬುಧವಾರ ನಸುಕಿನ ಜಾವ ತನುಶ್ರೀ ಅಸ್ವಸ್ಥಗೊಂಡಿದ್ದು, ಆಕೆಯ ಬಾಯಿಯಿಂದ ನೊರೆ ಬರುತ್ತಿರುವಂತೆ ಕಂಡುಬಂದಿತ್ತು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಗೆ ಏನಾಗಿತ್ತು ಎಂಬುದು ನಮಗೂ ಗೊತ್ತಿಲ್ಲ’ ಎಂದು ತಿಳಿಸಿದರು. 

ಈ ವಿಷಯ ತಿಳಿದ ಆಸ್ಪತ್ರೆಗೆ ಬಂದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಷಾದ್ರಿ, ವಿದ್ಯಾರ್ಥಿನಿಯ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಆಕೆಯ ಸಾವಿಗೆ ಕಾರಣವೇನು ಎಂಬುದು ತಿಳಿಯಲಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ನಿಯಮಾವಳಿಯಂತೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಚಿಂತಾಮಣಿ: ತಾಲ್ಲೂಕಿನ ಗಡಿಗವಾರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ವಿದ್ಯಾರ್ಥಿನಿಯೊಬ್ಬಳು ಬುಧವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. 8 ನೇ ತರಗತಿಯ ವಿದ್ಯಾರ್ಥಿನಿ ತನುಶ್ರೀ(14) ಮೃತಪಟ್ಟ ವಿದ್ಯಾರ್ಥಿನಿ. ವಸತಿ ಶಾಲೆಯಲ್ಲಿ ಮಂಗಳವಾರ ರಾತ್ರಿ ಎಂದಿನಂತೆ ಊಟ ಮಾಡಿ ವಿದ್ಯಾರ್ಥಿಗಳು ಮಲಗಿದ್ದಾರೆ. ಬುಧವಾರ ಬೆಳಿಗ್ಗೆ 4.55 ಗಂಟೆಗೆ ಬೆಲ್ ಬಾರಿಸಿದ್ದು ಎಲ್ಲ ವಿದ್ಯಾರ್ಥಿಗಳು ನಿದ್ದೆಯಿಂದ ಎದ್ದಿದ್ದಾರೆ. ಆದರೆ ತನುಶ್ರೀ ಆಸ್ವಸ್ಥಗೊಂಡಿದ್ದು ನಿದ್ದೆಯಿಂದ ಎದ್ದಿಲ್ಲ. ಸಹಪಾಟಿಗಳು ಕೂಡಲೇ ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಪ್ರಾಂಶುಪಾಲೆ ನಾಗರತ್ನಮ್ಮ ಬಂದು ನೋಡಿ, ಕೂಡಲೇ ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪೋಷಕರಿಗೂ ಸುದ್ದಿ ಮುಟ್ಟಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ. ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಕೋಡಿಗಲ್ ಗ್ರಾಮದ ನರಸಿಂಹಪ್ಪ ಎಂಬುವವರ ಪುತ್ರಿ ತನುಶ್ರೀ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಓದಿನಲ್ಲಿ ಹಾಗೂ ಇತರೆ ಚಟುವಟಿಕೆಗಳಲ್ಲಿ ತುಂಬಾ ಚೂಟಿಯಾಗಿದ್ದಳು ಎಂದು ಪ್ರಾಂಶುಪಾಲೆ ನಾಗರತ್ನ ತಿಳಿಸಿದರು. ವಸತಿಶಾಲೆಯ ವಿದ್ಯಾರ್ಥಿಗಳ ಪ್ರತಿದಿನ ವ್ಯಾಯಾಮ ಚಟುವಟಿಕೆಗಳು ನಸುಕಿನ 5 ಗಂಟೆಗೆ ಆರಂಭಗೊಳ್ಳುತ್ತವೆ. 4-55 ಕ್ಕೆ ಬೆಲ್ ಬಾರಿಸಿದಾಗ ಎಲ್ಲ ಎದ್ದಿದ್ದಾರೆ. ತನುಶ್ರೀ ಅಸ್ವಸ್ಥಗೊಂಡಿದ್ದು ಬಾಯಿಂದ ನೊರೆ ಬರುವಂತೆ ಕಾಣಿಸಿತು. ವಿದ್ಯಾರ್ಥಿಗಳು ತಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಏನಾಗಿದೆ ಎಂಬುದು ನಮಗೂ ಗೊತ್ತಿಲ್ಲ ಎಂದು ನಾಗರತ್ನ ತಿಳಿಸಿದರು. ವಿಷಯ ಗೊತ್ತಾದ ಕೂಡಲೇ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಶೇಶಾದ್ರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಕಾರಣ ಗೊತ್ತಾಗಲಿದೆ. ಕಾನೂನಿನಂತೆ ಪೊಲೀಸರಿಗೂ ದೂರು ನೀಡಲಾಗಿದೆ. ಸರ್ಕಾರದ ನಿಯಮಗಳಂತೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT