ಶುಕ್ರವಾರ, ಮೇ 27, 2022
29 °C

ತ್ರಿಪುರದಿಂದ ಸದ್ಭಾವನಾ ನಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆಯ ಅಂಶದಡಿ ಸೌಹಾರ್ದತೆ, ಸದ್ಭಾವನೆ ಮೂಡುವುದ ರಿಂದ ರಾಷ್ಟ್ರದಲ್ಲಿ ಭಾವೈಕ್ಯತೆ ಸದೃಢ ಗೊಳ್ಳುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ತ್ರಿಪುರ ಯುವ ವಿಕಾಸ ಕೇಂದ್ರ, ನವದೆಹಲಿಯ ರಾಷ್ಟ್ರೀಯ ಯುವ ಯೋಜನೆ, ಸುಂದರಲಾಲ್‌ ಬಹುಗುಣ ಇಕೋ ಕ್ಲಬ್‌ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸದ್ಭಾವನಾ ಯಾತ್ರೆಯ ಗ್ರಾಮ ಮೆರವಣಿಗೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಸುಗಟೂರು ಪಾಳೇಯಗಾರರ ರಾಜಧಾನಿಯಾಗಿದ್ದ ಸುಗಟೂರು ಗ್ರಾಮವು ಧಾರ್ಮಿಕ, ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ತ್ರಿಪುರದ ನಿಯೋಗಕ್ಕೆ ಭೇಟಿ ನೀಡಲು ರಾಜ್ಯದಿಂದ ಇದೇ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವುದು ಸೂಕ್ತವಾಗಿದೆ. ತ್ರಿಪುರದ ಸದ್ಭಾವನಾ ಯಾತ್ರೆಯು ರಾಜ್ಯದಲ್ಲಿ ಕೇವಲ ಎರಡು ಸ್ಥಳಗಳಿಗೆ ಭೇಟಿ ನೀಡುತ್ತಿದೆ. ಆ ಪೈಕಿ ಲ್ಲೂಕಿನ ಸುಗಟೂರು ಕೂಡ ಒಂದಾಗಿರುವುದು ಸಂತಸ ತಂದಿದೆ. ಇಲ್ಲಿನ ಸಂಸ್ಕೃತಿ, ಕಲೆ, ಧಾರ್ಮಿಕ ಅಂಶಗಳು ತ್ರಿಪುರದಲ್ಲಿ ನಡೆಯಲಿರುವ ಸದ್ಭಾವನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಬಿಂಬಿತವಾಗಲಿವೆ ಎಂದರು.

ಒಡಿಶಾದ ಹಿರಿಯ ಗಾಂಧಿವಾದಿ ಮಧುಸೂದನ್ ದಾಸ್ ಮಾತನಾಡಿ, ಯಾವುದೇ ಭೇದಭಾವವಿಲ್ಲದೇ ಭಾರತದ ನೆಲದಲ್ಲಿ ವಾಸಿಸುವ ಎಲ್ಲರ ಭಾವೈಕ್ಯ, ಸೌಹಾರ್ದತೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಸದ್ಭಾವನಾ ಯಾತ್ರೆಯ ಸಂಚಾಲಕ ಡೆಬಾಸಿಸ್ ಮಜುಂದಾರ್ ಮಾತನಾಡಿ, ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಭಾವನಾ ಯಾತ್ರೆಯು ಸಂಚರಿಸಲಿದೆ. ಕನ್ನಡದ ನೆಲದಲ್ಲಿ ನೀಡಿರುವ ಪ್ರೀತಿ, ವಿಶ್ವಾಸವು ಇನ್ನೆಲ್ಲಿಯೂ ಸಿಕ್ಕಿಲ್ಲ ಎಂದು ಬಣ್ಣಿಸಿದರು.

ತೆಲಂಗಾಣ ರಾಜ್ಯದ ರಾಷ್ಟ್ರೀಯ ಯುವ ಯೋಜನೆಯ ಅಧ್ಯಕ್ಷ ಕೆ. ಯಾದವರಾಜು, ಸುಂದರಲಾಲ್ ಇಕೋ ಕ್ಲಬ್‌ನ ಸಂಚಾಲಕ ಎಚ್.ಎಸ್. ರುದ್ರೇಶಮೂರ್ತಿ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ವಿ. ಪ್ರಶಾಂತ್, ಎಸ್‌ಡಿಎಂಸಿ ಅಧ್ಯಕ್ಷ ಎಂ. ಶಂಕರಪ್ಪ, ಉಪಾಧ್ಯಕ್ಷ ಜಗದೀಶ್, ಸದಸ್ಯ ನಾರಾಯಣಸ್ವಾಮಿ, ಗ್ರಾ.ಪಂ. ಸದಸ್ಯ ಸತೀಶ್, ಎ.ಎಂ. ತ್ಯಾಗರಾಜು ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು