ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ| ಇಂದು ಚಿಂತಾಮಣಿಗೆ ಪ್ರಿಯಾಂಕಾ

Published 2 ಮೇ 2023, 4:32 IST
Last Updated 2 ಮೇ 2023, 4:32 IST
ಅಕ್ಷರ ಗಾತ್ರ

ಚಿಂತಾಮಣಿ: ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಪರವಾಗಿ ಪ್ರಚಾರ ನಡೆಸಲು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೇ 2 ರಂದು ಮಂಗಳವಾರ ಚಿಂತಾಮಣಿಗೆ ಆಗಮಿಸಲಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಆಗಮಿಸುವ ಪ್ರಿಯಾಂಕ ಗಾಂಧಿ ಮಧ್ಯಾಹ್ನ 2.30ಕ್ಕೆ ಬಾಗೇಪಲ್ಲಿ ವೃತ್ತದಿಂದ ಎಂ.ಜಿ.ರಸ್ತೆಯಲ್ಲಿ ಗಜಾನನ ವೃತ್ತ, ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತದ ಮೂಲಕ ಕೋಲಾರ ವೃತ್ತದವರೆಗೂ ರೋಡ್ ಷೋ ನಡೆಸಲಿದ್ದಾರೆ.

ಮಾರ್ಗ ಬದಲಾವಣೆ: ಪ್ರಿಯಾಂಕ ಗಾಂಧಿ ರೋಡ್ ಷೋದಲ್ಲಿ ಅಧಿಕ ಸಂಖ್ಯೆಯ ಜನರು ಸೇರುವುದರಿಂದ ಎಂ.ಜಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಚಿಂತಾಮಣಿಯಿಂದ ಶಿಡ್ಲಘಟ್ಟ ಮತ್ತು ಶಿಡ್ಲಘಟ್ಟದಿಂದ-ಚಿಂತಾಮಣಿಗೆ ಸಂಚರಿಸುವ ವಾಹನಗಳಿಗೆ ಮಧ್ಯಾಹ್ನ 2.30 ರಿಂದ ಸಂಜೆ 5 ಗಂಟೆವರೆಗೆ ಪರ್ಯಾಯ ಮಾರ್ಗ ಕಲ್ಪಿಸಲಾಗುತ್ತದೆ.

ಜಿಲ್ಲಾಧಿಕಾರಿಗಳು ಮಾರ್ಗ ಬದಲಾವಣೆ ಆದೇಶ ಹೊರಡಿಸಿದ್ದಾರೆ. ಚಿಂತಾಮಣಿಯಿಂದ ಶಿಡ್ಲಘಟ್ಟ ಕಡೆಗೆ ಸಂಚರಿಸುವ ವಾಹನಗಳು ಚಿನ್ನಸಂದ್ರ ಕೈವಾರ-ಹುಣಸೇನಹಳ್ಳಿ ಕ್ರಾಸ್ ಮೂಲಕ ಶಿಡ್ಲಘಟ್ಟಕ್ಕೆ ಹೋಗಬೇಕು. ಅದೇ ರೀತಿ ಶಿಡ್ಲಘಟ್ಟ ಕಡೆಯಿಂದ ಚಿಂತಾಮಣಿಗೆ ಸಂಚರಿಸುವ ವಾಹನಗಳು ಹುಣಸೇನಹಳ್ಳಿ ಕ್ರಾಸ್-ಕೈವಾರ-ಚಿನ್ನಸಂದ್ರದ ಮೂಲಕ ಚಿಂತಾಮಣಿ ತಲಪುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT