ಬೆಳೆ ಹಾಳು ಚಿಂತಾಮಣಿ ಮಾರುಕಟ್ಟೆಗೆ ಪೂರೈಕೆಯಾಗುವ ಟೊಮೆಟೊದಲ್ಲಿ ಶೇ 70 ರಷ್ಟು ಗಡಿಭಾಗದ ಆಂಧ್ರಪ್ರದೇಶದಿಂದ ಆವಕವಾಗುತ್ತದೆ. ವೈರಸ್ ನಿಂದ ಸ್ಥಳೀಯ ಟೊಮೆಟೊ ಬೆಳೆ ಹಾಳಾಗಿದೆ. ಇಳುವರಿ ಬರುತ್ತಿಲ್ಲ.
ಆನಂದ್ ಟೊಮೆಟೊ ವ್ಯಾಪಾರಿ
ಬೆಳೆಯೇ ಇಲ್ಲ ಬೆಳೆಗಾರರೂ ಕಡಿಮೆ ನೊಣಗಳ ಕಾಟದಿಂದ ಫಸಲೂ ಕಡಿಮೆ. ಹೀಗಾಗಿ ಸಾಧಾರಣ ಬೆಲೆ ಸಿಗುತ್ತಿದೆ. ಆದರೆ ಬೆಲೆ ಏರಿಕೆಯ ಲಾಭ ಪಡೆಯಲು ರೈತರಲ್ಲಿ ಟೊಮೆಟೊ ತೋಟಗಳೇ ಇಲ್ಲ. ಬೆಲೆ ಏರಿಕೆ ಆದರೂ ಅದರ ಪೂರ್ಣ ಲಾಭ ರೈತರಿಗೆ ದೊರೆಯದೆ ಮಧ್ಯವರ್ತಿಗಳ ಪಾಲಾಗುತ್ತದೆ.