ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನಿಂದ ನಾವುಗಳು ಹತಾಶರಾಗಿಲ್ಲ ; ಎನ್.ಎಚ್.ಶಿವಶಂಕರರೆಡ್ಡಿ

Published 28 ಮೇ 2023, 14:25 IST
Last Updated 28 ಮೇ 2023, 14:25 IST
ಅಕ್ಷರ ಗಾತ್ರ


ಗೌರಿಬಿದನೂರು : ನಗರದ ಹೊರವಲಯದಲ್ಲಿರುವ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು.

ಈ ವೇಳೆ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿದ್ದು ಚುನಾವಣೆಗೂ ಮುನ್ನ ಜನತೆಗೆ ನೀಡಿದ್ದ ಭರವಸೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು. ಬಿಜೆಪಿ ಪಕ್ಷವು ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಪಡೆಯದ ಕಾರಣ ಹತಾಶರಾಗಿದ್ದು ವಿನಾ ಕಾರಣ ಗ್ಯಾರಂಟಿ ಕಾರ್ಡ್ ಮತ್ತು ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಮುಂದಾಗುತ್ತೇವೆ.

ಕ್ಷೇತ್ರದಲ್ಲಿ ಈ ಬಾರಿ 5 ಮಂದಿ ಅಭ್ಯರ್ಥಿಗಳು ಪ್ರಬಲವಾಗಿ ಕಣದಲ್ಲಿದ್ದ ಕಾರಣ ಮತಗಳು ಚದುರಿವೆ. ಜತೆಗೆ ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚಾಗಿದೆ. ಕಳೆದ 25 ವರ್ಷಗಳಿಂದಲೂ ಮಾಡಿರುವ ಅಭಿವೃದ್ಧಿ ‌ಕಾರ್ಯಗಳನ್ನು ನಂಭಿ ನಾವುಗಳು ಚುನಾವಣೆಯನ್ನು ಎದುರಿಸಿದ್ದೆವು. ಜನತೆ ಸ್ವಾಭಿಮಾನಕ್ಕಿಂತ ಹಣಕ್ಕೆ ಆಧ್ಯತೆ ನೀಡಿ ಪಕ್ಷೇತರ ‌ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಕ್ಷೇತ್ರದಲ್ಲಿನ ಜನತೆ ಮತ್ತು ಮುಖಂಡರು ಹಣಕ್ಕೆ ಮಾರುಹೋಗಿದ್ದಾರೆ ಎಂಬುದು ಸಾಭೀತಾಗಿದೆ. ನಿರೀಕ್ಷೆಗಿಂತ 10 ಸಾವಿರ ಮತಗಳ ಹಿನ್ನಡೆ ಹಾಗೂ ಅಂತಿಮ ಕ್ಷಣದಲ್ಲಿ ಸಂಘಟನೆಯ ಕೊರತೆಯಿಂದಾಗಿ ಪಕ್ಷವು ಈ ಬಾರಿ ಸೋಲು ಕಾಣುವಂತಾಯಿತು. ಇದರಿಂದಾಗಿ ನಾವು ಹತಾಶರಾಗಿಲ್ಲ, ಒಂದು ಹಂತದಲ್ಲಿ ಸೋತಿರಬಹುದು ಆದರೆ ಮತ್ತೊಂದು ‌ಹಂತದಲ್ಲಿ ಜಯಗಳಿಸಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕಾರಣ ನಾನು ಶಕ್ತಿ ಮೀರಿ ಸರ್ಕಾರದಿಂದ ಸಹಕಾರ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತೇವೆ. ಸ್ಥಳೀಯವಾಗಿ ಅಧಿಕಾರ ಇಲ್ಲದಿದ್ದರೂ ಕೂಡ ಸಮಾಜಕ್ಕೆ ಹಾಗೂ ಕ್ಷೇತ್ರದ ಜನತೆಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ‌ನೀಡುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ‌ಕಾಂಗ್ರೆಸ್ ಅಧ್ಯಕ್ಷರಾದ ಬಿ.ಪಿ.ಅಶ್ವತ್ಥನಾರಾಯಣಗೌಡ, ಮುಖಂಡರಾದ ಮರಳೂರು ಹನುಮಂತರೆಡ್ಡಿ, ಬಿ.ಆರ್.ಶ್ರೀನಿವಾಸಮೂರ್ತಿ, ಇ.ಎಸ್.ಸಂಪಂಗಿ, ವಿ.ರಮೇಶ್, ಪ್ರಕಾಶರೆಡ್ಡಿ, ಗಂಗಾಧರಪ್ಪ, ಖಲೀಂ ಉಲ್ಲಾ, ರಫೀಕ್, ರೇಣುಕಾ, ಡಿ.ಎ.ಮಂಜುಳಾ, ಜಿ.ಎನ್.ವೆಂಕಟಾದ್ರಿ, ಗಿರೀಶ್ ರೆಡ್ಡಿ, ಶ್ಯಾಂ, ವೆಂಕಟೇಶ್, ವಿ.ಅಮರನಾಥ್, ಮರಳೂರು ‌ನಾಗರಾಜ್
ಸೇರಿದಂತೆ ಇತರರು ಭಾಗವಹಿಸಿದ್ದರು.

ಬಾಕ್ಸ್
ಅಧಿಕಾರಿಗಳು ನಮ್ಮ ಮಾತನ್ನು ಕೇಳಲೇಬೇಕು ;

ಕ್ಷೇತ್ರದಲ್ಲಿ ಪಕ್ಷೇತರ ಶಾಸಕರು ಅಧಿಕಾರದಲ್ಲಿದ್ದರೂ ಕೂಡ ತಾಲ್ಲೂಕು ‌ಮತ್ತು ಜಿಲ್ಲೆಯಲ್ಲಿನ ಅಧಿಕಾರಿಗಳು ನಮ್ಮ ಮಾತನ್ನು ಕೇಳಬೇಕಾಗಿದೆ. ನಮಗೆ ಸ್ಥಳೀಯವಾಗಿ ‌ಅಧಿಕಾರ ಇಲ್ಲದಿದ್ದರೂ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ. ನಮ್ಮ ಮಾತನ್ನು ಕೇಳದ ತಾಲ್ಲೂಕು ‌ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಬಾಕ್ಸ್
ಪಕ್ಷೇತರ ಶಾಸಕ ಕಾಂಗ್ರೆಸ್ ಗೆ ಸೇರ್ಪಡೆಯಿಲ್ಲ ;

ಕ್ಷೇತ್ರದಲ್ಲಿನ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ತಿಳಿಸಿರಬಹುದು. ಆದರೆ ಕಾಂಗ್ರೆಸ್ ಪಕ್ಷದಲ್ಲಿನ ಸ್ಥಳೀಯ ಶಾಸಕರು ಮತ್ತು ಹಿರಿಯ ನಾಯಕರ ಅನುಮತಿ ಇಲ್ಲದೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮಾತಿಲ್ಲ. ವ್ಯವಹಾರಿಕವಾಗಿ ಅವರು ಪಕ್ಷದ ನಾಯಕರೊಂದಿಗೆ ಭಾಂದವ್ಯ ಹೊಂದಿರಬಹುದು ಆದರೆ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಅಡಿಯಲ್ಲಿ ಸ್ಪರ್ಧಿಸುವ ಅವಕಾಶ ಇರುವುದಿಲ್ಲ ಎಂದು ಶಿವಶಂಕರರೆಡ್ಡಿ ಹೇಳಿದರು.

ಬಾಕ್ಸ್ ;
ದಶಕಗಳ ಹಿಂದೆಯೇ ಆಪರೇಷನ್ ಕಮಲ

2012 ರಲ್ಲೇ ಬಿಜೆಪಿಯ ರಾಜ್ಯ ನಾಯಕರುಗಳು ಆಪರೇಷನ್ ಕಮಲ ಹೆಸರಿನಲ್ಲಿ ನನ್ನನ್ನು ಹಣದಿಂದ ಖರೀದಿ ‌ಮಾಡಲು ಮುಂದಾಗಿದ್ದರು. ಆದರೆ ಸ್ವಾಭಿಮಾನ ಮತ್ತು ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ಹಾಗೂ ಅವರು ನಮ್ಮ ಮೇಲೆ ಇಟ್ಟಿರುವ ನಂಭಿಕೆಗೆ ಬೆಲೆ ನೀಡಿ ನಾನು ಪಕ್ಷದಲ್ಲೇ ಉಳಿದಿದ್ದೇನೆ. ಯಾವುದೇ ಕಾರಣಕ್ಕೂ ಹಣಕ್ಕೆ ಮಾರಾಟವಾಗುವ ವಸ್ತುಗಳು ‌ನಾವಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಜನತೆಯ ನೆಮ್ಮದಿಗೆ ಶ್ರಮಿಸಲು ಬದ್ಧವಾಗಿದ್ದೇನೆ ಎಂದರು.

ಗೌರಿಬಿದನೂರು ‌ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಪಕ್ಷದ ಮುಖಂಡರು
ಗೌರಿಬಿದನೂರು ‌ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಪಕ್ಷದ ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT