ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿಗೆ ಬಂದ ಸೈಕಲ್ ಯಾತ್ರಿಗೆ ಸ್ವಾಗತ

ದೇಶದ ಕಲೆ, ಸಂಸ್ಕೃತಿ ರಕ್ಷಣೆಗೆ ಯಾತ್ರೆ
Last Updated 29 ಡಿಸೆಂಬರ್ 2022, 3:22 IST
ಅಕ್ಷರ ಗಾತ್ರ

ಬಾಗೇಪಲ್ಲಿ: ದೆಹಲಿ ಮೂಲದ ನಿವೃತ್ತ ಪ್ರಾಧ್ಯಾಪಕ ಡಾ. ಕಿರಣ್ ಸೇಥ್ ಅವರ ಸೈಕಲ್ ಯಾತ್ರೆ ಮಂಗಳವಾರ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ರಾಜ್ಯದ ಗಡಿಗೆ ಆಗಮಿಸಿದೆ.

ದೇಶದ ಕಲೆ, ಸಂಸ್ಕೃತಿ ಮತ್ತು ಸಂಗೀತ ಉಳಿಸಿ, ಬೆಳೆಸಲು ಆಗಸ್ಟ್ 15ರಂದು ಕಿರಣ್ ಸೇಥ್ ಅವರು ದೆಹಲಿಯಿಂದ ಕನ್ಯಾಕುಮಾರಿವರೆಗೆ 3 ಸಾವಿರ ಕಿ.ಮೀ ನಷ್ಟು ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ.

ತಾಲ್ಲೂಕು ತಹಶೀಲ್ದಾರ್ ವೈ. ರವಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ. ನಾರಾಯಣ ಸೇರಿದಂತೆ ಪ್ರಾಧ್ಯಾಪಕರು, ನ್ಯಾಷನಲ್, ವಿಕಾಸ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಬಾಲಕರ ಪ್ರೌಢಶಾಲೆಯ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿ, ವಿದ್ಯಾರ್ಥೀನಿಯರು ಭವ್ಯ ಸ್ವಾಗತ ಕೋರಿದರು.

ನ್ಯಾಷನಲ್ ಕಾಲೇಜಿನ ಅವರಣದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಕಿರಣ್ ಸೇಥ್ ಸುದ್ದಿಗಾರರೊಂದಿಗೆ ಮಾತನಾಡಿ, ಸೈಕಲ್ ತುಳಿದು ದೇಶದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಉಳಿಸಿ, ಬೆಳೆಸುವುದು ನನ್ನ ಗುರಿ ಆಗಿದೆ. ಯಾತ್ರೆ ಉದ್ದಕ್ಕೂ ವಿವಿಧ ರಾಜ್ಯಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಜನರು ಮತ್ತು ಯುವ ಪೀಳಿಗೆಯನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದೇನೆ. ಪಾಶ್ಚಿಮಾತ್ಯ ಸಂಸ್ಕೃತಿ ಬಿಟ್ಟು, ದೇಶೀಯ ಸಂಸ್ಕೃತಿ, ಕಲೆ, ಸಂಗೀತ ಉಳಿಸಲು ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.

ರಾಷ್ಟ್ರೀಯ ಸಂಗೀತ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಸ್ವಯಂಸೇವಕಿ ವಿದ್ಯಾರಾಣಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ. ನಯಾಜ್ ಅಹಮದ್, ಹಿರಿಯ ಗ್ರಂಥಪಾಲಕ ಡಾ.ಸಿ.ಎಸ್. ವೆಂಕಟರಾಮರೆಡ್ಡಿ, ಪ್ರಾಧ್ಯಾಪಕ ಗಂಗಾಧರ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ, ಸರ್ಕಾರಿ ಬಾಲಕರ ಪ್ರೌಢಶಾಲಾ ಶಿಕ್ಷಕ ಕೆ.ವಿ. ಶ್ರೀನಿವಾಸ್, ಕಂದಾಯ ಅಧಿಕಾರಿಗಳಾದ ವೇಣುಗೋಪಾಲ್, ಕಿರಣ್‍ಕುಮಾರ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT