ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಕಾರ್ಮಿಕರ ವಜಾ; ಖಂಡಿಸಿ ಪ್ರತಿಭಟನೆ

Last Updated 19 ಮಾರ್ಚ್ 2021, 4:27 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7 ರಲ್ಲಿನ ಚಾಬ್ರಾಸ್ ಟೋಲ್ಪ್ಲಾಜಾದಲ್ಲಿ 11 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ನಾಲ್ವರನ್ನು ತೆಗೆದುಹಾಕಿರುವ ಕ್ರಮ ಖಂಡಿಸಿ ಸಿಐಟಿಯು ಮುಖಂಡರು, ನೌಕರರ ಕುಟುಂಬದವರು ಗುರುವಾರ ಟೋಲ್ಪ್ಲಾಜಾದ ಆಡಳಿತ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಸಿಐಟಿಯು ತಾಲ್ಲೂಕು ಅಧ್ಯಕ್ಷ ಬಿ.ಆಂಜನೇಯರೆಡ್ಡಿ ಮಾತನಾಡಿ, ‘ಚಾಬ್ರಾಸ್ ಟೋಲ್ಪ್ಲಾಜಾದಲ್ಲಿ ಕೊಂಡಂವಾರಿಪಲ್ಲಿ ಕೆ.ಎನ್.ಗಿರೀಶ್, ಹೊಸಹುಡ್ಯ ಸಿ.ವೆಂಕಟೇಶ್, ಆದಿಗಾನಹಳ್ಳಿ ವಿ.ಸುರೇಶ್, ಯಲ್ಲಂಪಲ್ಲಿ ಆರ್.ವೆಂಕಟರೆಡ್ಡಿ ಅವರನ್ನು ಏಕಾಏಕಿ ತೆಗೆದುಹಾಕಿದ್ದಾರೆ. ಇಲ್ಲಿನವರ ಕಿರುಕುಳಕ್ಕೆ ರಮಣ ಹಾಗೂ ಸಂತೋಷ್ ಎಂಬ ಕಾರ್ಮಿಕರು ಸ್ವಯಂಪ್ರೇರಿತವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ’ ಎಂದು ಆರೋಪಿಸಿದರು.

‘ನನ್ನ ಪತಿ ವೆಂಕಟರೆಡ್ಡಿ 11 ವರ್ಷಗಳಿಂದ ಟೋಲ್ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕೊರೊನಾ ಸೋಂಕಿನ ಸಂಕಷ್ಟದ ಕಾಲದಲ್ಲಿ ಟೋಲ್ ಗೇಟ್‌ನವರುನೋಟಿಸ್‌ ಜಾರಿ ಮಾಡದೇ, ಕರ್ತವ್ಯ ಲೋಪದ ಬಗ್ಗೆ ತಿಳಿಸದೇ ಏಕಾಏಕಿ ತೆಗೆದುಹಾಕಿದ್ದಾರೆ. ಇದರಿಂದ ಕುಟುಂಬ ಜೀವನದ ನಿರ್ವಹಣೆ ಕಷ್ಟ ಆಗಿದೆ. ಕೂಡಲೇ ನೌಕರರನ್ನು ಪುನಃ ಸೇರಿಸಿಕೊಳ್ಳಬೇಕು. ಬಡಕುಟುಂಬಗಳಿಗೆ ನೆರವಾಗಬೇಕು’ ಎಂದು ಯಲ್ಲಂಪಲ್ಲಿಯ ವೆಂಕಟರೆಡ್ಡಿ ಪತ್ನಿಶಶಿಕಲಾ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ನೂತನ ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣದ) ತಾಲ್ಲೂಕು ಅಧ್ಯಕ್ಷ ಎಲ್.ಎನ್.ಶಂಕರ್, ಜಿಲ್ಲಾ ಸಂಚಾಲಕ ತಿಪ್ಪಣ್ಣ, ತಾಲ್ಲೂಕು ಸಂಚಾಲಕ ಎನ್.ಸತೀಶ್, ಕಾರ್ಯಾಧ್ಯಕ್ಷ ಎನ್.ನರೇಶ್, ಖಜಾಂಚಿ ಶ್ಯಾನು, ರಾಮಾಂಜಿ ಸೇರಿದಂತೆ ನೌಕರರ ಕುಟುಂಬದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT