ಗೌರಿಬಿದನೂರು: ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಸ್ವಯಂಪ್ರೇರಿತ ರಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇದು ಪಕ್ಷದ ಬಲವರ್ಧನೆ ಮತ್ತು ಅಭ್ಯರ್ಥಿಗೆ ಗೆಲುವಿಗೆ ಸಹಕಾರಿ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎನ್.ಪ್ರಕಾಶರೆಡ್ಡಿ ತಿಳಿಸಿದರು.

ಜೆಡಿಎಸ್ ಮುಖಂಡ ಹಾಲ ಹಾನಹಳ್ಳಿ ಬಾಬುರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ನರಸಿಂಹಮೂರ್ತಿ ಮಾತನಾಡಿ, 'ಸ್ಥಳೀಯ ಶಾಸಕರು ತಮ್ಮ ಅಧಿಕಾರವಧಿಯಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬೆಳೆಸಿದ್ದಾರೆ. ಅವರ ಸ್ನೇಹಪರವಾದ ಆಡಳಿತವನ್ನು ಕಂಡಿರುವ ಕ್ಷೇತ್ರದ ಜನರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರ ಆಯ್ಕೆಗೆ ಬದ್ಧವಾಗಿದ್ದಾರೆ’ ಎಂದು ತಿಳಿಸಿದರು.

ಬಾಬುರೆಡ್ಡಿ ಮಾತನಾಡಿ, 'ದಶಕಗಳ ಕಾಲ ಪ್ರಾಮಾಣಿಕವಾಗಿ ಪಕ್ಷ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದರೂ ವರಿಷ್ಠರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಈ ಭಾಗದಲ್ಲಿ ಮೂರು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಜನರಿಗೆ ನೀಡಿದ್ದ ಭರವಸೆ ಈಡೇರಿಸಲಿಲ್ಲ. ಇದರಿಂದ ಬೇಸತ್ತು ಪಕ್ಷ ಬಿಟ್ಟಿದ್ದೇನೆ’ ಹೇಳಿದರು.

ಮುಖಂಡರಾದ ಹನುಮಂತರೆಡ್ಡಿ, ಎನ್.ಎಸ್.ಭಾರ್ಗವರೆಡ್ಡಿ, ತಾಲ್ಲೂಕು ಘಟಕದ ಕಾರ್ಯದರ್ಶಿ ವೆಂಕಟರವಣ,
ಗ್ರಾಮ ಪಂಚಾಯಿತಿ ಸದಸ್ಯೆ ಈಶ್ವರಮ್ಮ, ನರಸಮ್ಮ ಮೂರ್ತಿ, ಮುಖಂಡರಾದ ತಿಮ್ಮಾರೆಡ್ಡಿ, ಕುದುರೆಬ್ಯಾಲ್ಯ ಪ್ರಸನ್ನ, ಎಂ.ಆರ್.ಮೂರ್ತಿ, ವಿಠಲ್, ನಾರಾಯಣರೆಡ್ಡಿ, ಯರ್ರಪ್ಪರೆಡ್ಡಿ, ಸೋಮೇಶ್, ನರಸಿಂಹಪ್ಪ, ಶ್ರೀನಿವಾಸ್, ಮಲ್ಲಿಕಾರ್ಜುನ ರೆಡ್ಡಿ, ರಾಮಾಂಜಿನಪ್ಪ, ಜಗನ್ನಾಥ್ ಗೌಡ, ರಾಮಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.