ಬಾಗೇಪಲ್ಲಿ: ತಾಲ್ಲೂಕಿನ ಕಸಬಾ ಹೋಬಳಿಯ ಗ್ರಾಮಾಂತರ ಪ್ರದೇಶ ಗಳಿಗೆ ವಿದ್ಯುತ್ ವ್ಯತ್ಯಯ ನಿರಂತರ ವಾಗಿದೆ. ನಿರಂತರ ಜ್ಯೋತಿ ಯೋಜನೆ ಯಡಿ ವಿದ್ಯುತ್ ಪೂರೈಸದೇ ನಗರಲೈನ್ನಲ್ಲಿ ವಿದ್ಯುತ್ ನೀಡಿ ಎಂದು ಆಗ್ರಹಿಸಿ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ಬೆಸ್ಕಾಂ ಇಲಾಖೆ ವತಿಯಿಂದ ಕೆಎಸ್ಆರ್ಟಿಸಿ ಸಾರಿಗೆ ಘಟಕದ ಕಚೇರಿ ಎದು ರು ನಡೆಯುತ್ತಿದ್ದ ನಿರಂತರ ಜ್ಯೋತಿ ಯೋಜನೆ ಕಾಮಗಾರಿಗೆ ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಉದ್ರಿಕ್ತ ವಾತಾ ವರಣ ನಿರ್ಮಾಣವಾಗಿತ್ತು. ಆಗ ಸ್ಥಳಕ್ಕೆ ಆಗ ಮಿಸಿದ ಪೊಲೀಸರ ಸರ್ಪಗಾವ ಲಿನಲ್ಲಿ ನಿರಂತರ ಜ್ಯೋತಿ ಕಾಮಗಾರಿ ಮುಂದುವರೆಸಲಾಯಿತು.

ಗ್ರಾಮೀಣ ಪ್ರದೇಶಗಳಿಗೆ ಸುಮಾರು ಆರು ಗಂಟೆ ಕಾಲ ಸಹ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಇದ ರಿಂದ ಬೆಳೆಗಳಿಗೆ ನೀರು ಹಾಯಿ ಸಲು ತೊಂದರೆಯಾಗಿದೆ. ಗ್ರಾಮೀಣ ಪ್ರದೇಶ ಗಳಿಗೆ ನಿರಂತರ ಜ್ಯೋತಿ ಉಪಯೋಗ ವಿಲ್ಲ ಎಂದು ಗ್ರಾಮಸ್ಥ ಜಯರಾಮರೆಡ್ಡಿ ಆರೋಪಿಸಿದರು.

ತಾಲ್ಲೂಕಿನಲ್ಲಿ ಸುಮಾರು 12 ಫೀಡರ್ಗಳನ್ನು ರಚಿಸ ಲಾಗುವುದು. ಇದರಲ್ಲಿ 11 ಫೀಡರ್ಗಳ ಕಾಮಗಾರಿ ನಿರ್ಮಾಣದ ಹಂತದಲ್ಲಿವೆ. ಪ್ರಸ್ತುತ ನಿಯಮದಂತೆ ವಿದ್ಯುತ್ ಪೂರೈ ಸಲಾಗುವುದು ಎಂದು ಬೆಸ್ಕಾಂ ಇಲಾಖೆ ಎಂಜಿನಿಯರ್ ವೈರಮುಡಿ ತಿಳಿಸಿದರು.

ಪ್ರತಿಭಟನೆ ನಡೆಯುವ ಹಿನ್ನೆಲೆಯಲ್ಲಿ ಪಟ್ಟಣದ ಕೆಎಸ್ಆರ್ಟಿ ಸಾರಿಗೆ ಘಟ ಕದ ಎದುರು ಪೊಲೀಸ್ ಬಂದೋಬಸ್ತ್ ಇತ್ತು. ಕೆಲಕಾಲ ಗ್ರಾಮಸ್ಥರ ಹಾಗೂ ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಕಾಮಗಾರಿಗೆ ಅಡ್ಡಿಪಡಿಸಲು ಆಗ ಮಿಸಿದ್ದ ರೈತರನ್ನು ಪೊಲೀಸರು ಚದುರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.