ಚಿಂತಾಮಣಿ: ಪಟ್ಟಣದಲ್ಲಿ ಡೆಂಗೆ ಮತ್ತು ಚಿಕನ್ಗುನ್ಯಾ ಜ್ವರಗಳಿಗೆ ಕಾರಣವಾಗುವ ಸೊಳ್ಳೆಗಳ ಬಗ್ಗೆ ಜನ ಜಾಗೃತಿ ಮೂಡಿಸುವುದು ಹಾಗೂ ಮನೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ನೀರಿನ ತೊಟ್ಟಿ ಮತ್ತು ಡ್ರಮ್ಗಳನ್ನು ಪರಿಶೀಲಿಸಲು ಸೋಮವಾರ ಪೌರಾಯುಕ್ತ ಡಾ.ರಾಮೇಗೌಡ ಮತ್ತು ಸಿಬ್ಬಂದಿ 1 ಮತ್ತು 3ನೇ ವಾರ್ಡ್ನ ಹಲವು ಮನೆಗಳಿಗೆ ಭೇಟಿ ನೀಡಿದರು.

ಕೆಲವು ಮನೆಗಳಲ್ಲಿ ನೀರನ್ನು ಎರಡು ತಿಂಗಳವರೆಗೆ ಬದಲಿಸುವುದಿಲ್ಲ. ಸೊಳ್ಳೆಗಳ ಉತ್ಪತ್ತಿಗೆ ಇದು ಮುಖ್ಯ ಕಾರಣ. ಸೊಳ್ಳೆಗಳ ನಿಯಂತ್ರಣಕ್ಕೆ `ಅಬೇಕ್~ ಔಷಧಿ ಸಿಂಪಡಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮನೆಗಳ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವಾರಕ್ಕೆ ಒಮ್ಮೆಯಾದರೂ ಮನೆಯಲ್ಲಿರುವ ಎಲ್ಲ ನೀರಿನ ತೊಟ್ಟಿಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷ ಚೌಡರೆಡ್ಡಿ, ಸದಸ್ಯರಾದ ಭಾಸ್ಕರ್, ನಂಜಮ್ಮ, ದೇವರಾಜ್, ಸುರೇಶ್, ಶಬ್ಬೀರ್, ಆರೋಗ್ಯ ನಿರೀಕ್ಷಕರಾದ ಸಿ.ಕೆ.ಬಾಬು, ಆರತಿ, ಪ್ರದೀಪ್, ಪ್ರಸಾದ್, ವೆಂಕಟೇಶಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.