ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಫಲಿತಾಂಶ: ಜಿಲ್ಲೆಗೆ 9ನೇ ಸ್ಥಾನ

ಕಾಫಿನಾಡು: ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ
Last Updated 19 ಜೂನ್ 2022, 4:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದ್ವಿತೀಯ ಪಿಯು ಫಲಿತಾಂಶವು ಶನಿವಾರ ಪ್ರಕಟವಾಗಿದ್ದು 9670 ವಿದ್ಯಾರ್ಥಿಗಳ ಪೈಕಿ 6287 (ಶೇ 65.02) ಮಂದಿ ಉತ್ತೀರ್ಣರಾಗಿದ್ದಾರೆ. ರಾಜ್ಯದಲ್ಲಿ ಜಿಲ್ಲೆಯು 9ನೇ ಸ್ಥಾನ ದಾಖಲಿಸಿದೆ.

2020ರಲ್ಲಿ ಜಿಲ್ಲೆಯು ಐದನೇ ಸ್ಥಾನ ಪಡೆದಿತ್ತು. ಈ ಬಾರಿ ನಾಲ್ಕು ಸ್ಥಾನ ಹಿಂದಕ್ಕೆ ಹೋಗಿದೆ. 4597 ಬಾಲಕರ ಪೈಕಿ 2646 (ಶೇ 57.56) ಮಂದಿ, 5073 ವಿದ್ಯಾರ್ಥಿನಿಯರ ಪೈಕಿ 3641 (ಶೇ 71.77) ತೇರ್ಗಡೆಯಾಗಿದ್ದಾರೆ.

ಪರೀಕ್ಷೆ ಬರೆದಿದ್ದ ಹೊಸಬರು 8712 ಮಂದಿ ಪೈಕಿ 6048 (ಶೇ 69.42) ಮಂದಿ, 638 ಪುನರಾವರ್ತಿತರ ಪೈಕಿ 158 (ಶೇ 24.76) ಹಾಗೂ 320 ಖಾಸಗಿ ಅಭ್ಯರ್ಥಿಗಳ ಪೈಕಿ 81 (ಶೇ 25.31) ಮಂದಿ ತೇರ್ಗಡೆಯಾಗಿದ್ದಾರೆ.

ಆಂಗ್ಲ ಮಾಧ್ಯಮದ 5144ವಿದ್ಯಾರ್ಥಿಗಳಲ್ಲಿ 3814 (ಶೇ 74.14), ಕನ್ನಡ ಮಾಧ್ಯಮದ 4526ವಿದ್ಯಾರ್ಥಿಗಳಲ್ಲಿ 2473 (ಶೇ 54.64) ಮಂದಿ, ನಗರ ಪ್ರದೇಶದ 7094ವಿದ್ಯಾರ್ಥಿಗಳಲ್ಲಿ 4568 (ಶೇ 64.39), ಗ್ರಾಮೀಣ ಪ್ರದೇಶದ 2576 ವಿದ್ಯಾರ್ಥಿಗಳ ಪೈಕಿ 1719(ಶೇ 66.73) ಮಂದಿ ಪಾಸಾಗಿದ್ದಾರೆ.

ಕಲಾ ವಿಭಾಗದಲ್ಲಿ 3496 ಮಂದಿ 1848 (ಶೇ 52.86), ಹೊಸಬರು 2931 ಮಂದಿ 1689 (ಶೇ 57.63) ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 3518 ವಿದ್ಯಾರ್ಥಿಗಳ ಪೈಕಿ 2429 (ಶೇ 69.04), ಹೊಸಬರು 3229 ವಿದ್ಯಾರ್ಥಿಗಳ ಪೈಕಿ 2364 (ಶೇ 73.21) ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 2656 ಮಂದಿ ಪೈಕಿ 2010 ಮಂದಿ(ಶೇ 75.68), ಹೊಸಬರು 2552 ವಿದ್ಯಾರ್ಥಿಗಳ ಪೈಕಿ 1995 ಮಂದಿ (ಶೇ 78.17) ಉತ್ತೀರ್ಣರಾಗಿದ್ದಾರೆ.

‘ಪರೀಕ್ಷೆ ತಯಾರಿ; ವಿಶೇಷ ತರಗತಿ’

‘ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕೋಚಿಂಗ್‌ ನೀಡಿ ಪರೀಕ್ಷೆಗೆ ತಯಾರಿ ಮಾಡಿದ್ದೇವು. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ‘ವಿಶ್ವಾಸ ಕಿರಣ’ ತರಬೇತಿ ನೀಡಲಾಗಿತ್ತು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಾರಿ ಪ್ರಾರಂಭದಿಂದಲೇ ದ್ವಿತೀಯ ಪಿಯನವರಿಗೆ ವಿಶೇಷ ತರಗತಿ ನಡೆಸಲುಉದ್ದೇಶಿಸಲಾಗಿದೆ. ಇಂಗ್ಲಿಷ್‌ ಮೊದಲಾದ ವಿಷಯಗಳಿಗೆ ಒತ್ತು ನೀಡಲಾಗುವುದು. ಮೊರಾರ್ಜಿ ವಿದ್ಯಾಲಯ ಸಹಿತ ವಿವಿಧೆಡೆಗಳಲ್ಲಿ ಶೀಘ್ರದಲ್ಲಿ ಆರಂಭಿಸಲಾಗುವುದು. ಮುಂದಿನ ಬಾರಿ ಉತ್ತಮ ಫಲಿತಾಂಶ ದಾಖಲಿಸಲು ಈಗಿನಿಂದಲೇ ತಯಾರಿ ಆರಂಭಿಸುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT