ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯ ಇಂಗ್ಲಿಷ್‌ ಪರೀಕ್ಷೆ ಸುಗಮ

Last Updated 18 ಜೂನ್ 2020, 15:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗುರುವಾರ ದ್ವಿತೀಯ ಪಿಯ ಇಂಗ್ಲಿಷ್‌ ಪರೀಕ್ಷೆ ಸುಗಮವಾಗಿ ನಡೆದಿದೆ. 10,019 ಪರೀಕ್ಷಾರ್ಥಿಗಳ ಪೈಕಿ 377 ಮಂದಿ ಗೈರು ಹಾಜರಾಗಿದ್ದರು.

ಒಟ್ಟು 18 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಿತು. ಒಟ್ಟು 9642 ಮಂದಿ ಪರೀಕ್ಷೆ ಬರೆದರು.

‘ಕೇಂದ್ರಗಳಲ್ಲಿ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನಿಂಗ್‌, ಅಂತರ ನಿರ್ವಹಣೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು, ಸಿಬ್ಬಂದಿ ಯಾರೂ ಗುಂಪುಗೂಡದಂತೆ ನಿಗಾ ವಹಿಸಲಾಗಿತ್ತು. ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿದ್ದರು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊರ ಜಿಲ್ಲೆಗಳ 1,307 ಪರೀಕ್ಷಾರ್ಥಿಗಳ ಪೈಕಿ 24 ಮಂದಿ ಗೈರು ಹಾಜರಾಗಿದ್ದರು. ಹೊರಜಿಲ್ಲೆಗಳವರ ಪೈಕಿ ದಕ್ಷಿಣ ಕನ್ನಡ, ಉಡುಪಿಯವರು ಜಾಸ್ತಿ ಇದ್ದರು. ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ’ ಎಂದು ಅವರು ತಿಳಿಸಿದರು.

ಕೇಂದ್ರಗಳ ಬಳಿ ಸೂಚನಾ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ನೋಂದಣಿ ಸಂಖ್ಯೆ, ಕೊಠಡಿ ಮಾಹಿತಿಯನ್ನು ಎರಡ್ಮೂರು ಕಡೆ ಪ್ರದರ್ಶಿಸಲಾಗಿತ್ತು. ಪೊಲೀಸ್‌ ಕಣ್ಗಾವಲು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT