ಗುರುವಾರ , ಮೇ 6, 2021
23 °C

32 ಅಡಿ ಉದ್ದದ ರುದ್ರಾಕ್ಷಿ ಮಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಳೆಹೊನ್ನೂರು: ಬೆಂಗಳೂರಿನ ಆರ್.ವಿ. ಭದ್ರಯ್ಯ ಸ್ಟೋರ್ಸ್‌ನ ಆರ್.ಬಿ.ಬಸವರಾಜ್ ಮತ್ತು ಕುಟುಂಬದವರು 32 ಅಡಿ ಉದ್ದದ ಪಂಚಮುಖಿ ರುದ್ರಾಕ್ಷಿ ಮಾಲೆಯನ್ನು ಇಲ್ಲಿನ ರಂಭಾಪುರಿ ಪೀಠಕ್ಕೆ ಶುಕ್ರವಾರ ಅರ್ಪಿಸಿದರು.

ನಂತರ ಮಾತನಾಡಿದ ಆರ್.ಬಿ. ಬಸವರಾಜ್, ‘ಈ ಮಾಲೆ ನಿರ್ಮಾಣಕ್ಕೆ ನೇಪಾಳದಿಂದ ರುದ್ರಾಕ್ಷಿ ತರಿಸಲಾಗಿದೆ. 30 ಜನರ ತಂಡವು 15 ದಿನಗಳ ಕಾಲ ಶ್ರಮಿಸಿದ್ದು, 50,108 ಪಂಚಮುಖಿ ರುದ್ರಾಕ್ಷಿಗಳಿಂದ ಮಾಲೆ ಮಾಡಲಾಗಿದೆ. ಸುಮಾರು 300 ಕೆಜಿ ತೂಕ ಇದೆ. ರುದ್ರಾಕ್ಷಿಯನ್ನು ಪೋಣಿಸಲು 50 ಕೆ.ಜಿ ಹಿತ್ತಾಳೆ ತಂತಿ ಬಳಸಲಾಗಿದ್ದು, ನಡುವೆ 5 ಸಾವಿರ ಕ್ರಿಸ್ಟಲ್ ಬಾಲ್ ಅಳವಡಿಸಲಾಗಿದೆ’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು