ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆ | ಗೊಲ್ಲ ಸಮುದಾಯದ ಬೀದಿಗೆ ಕಾಲಿಟ್ಟ ದಲಿತ ಯುವಕನ ಮೇಲೆ ಹಲ್ಲೆ

Published 3 ಜನವರಿ 2024, 6:51 IST
Last Updated 3 ಜನವರಿ 2024, 6:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಗೇರುಮರಡಿ ಗ್ರಾಮದ ಗೊಲ್ಲರ ಸಮುದಾಯದ ಬೀದಿಗೆ ಕಾಲಿಟ್ಟ ಮಾದಿಗ ಸಮುದಾಯದ ಯುವಕ ಮಾರುತಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ 15 ಜನರ ವಿರುದ್ಧ ತರೀಕೆರೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುವ ಎಂ.ಸಿ.ಹಳ್ಳಿಯ ಮಾರುತಿ ಎಂಬ ಯುವಕ ಗೇರುಮರಡಿ ಗ್ರಾಮದ ರವಿ ಎಂಬುವರ ಹಳೇ ಮನೆಯ ಕೆಡವಿ ಮಣ್ಣು ತುಂಬಿಸುವ ಕೆಲಸಕ್ಕೆ ಹೊಗಿದ್ದರು.

‘ಆಗ ಏಕಾಏಕಿ 30ರಿಂದ 40 ಜನ ಬಂದು ಮಾದಿಗ ಸಮುದಾಯದ ನೀವು ನಮ್ಮ ಬೀದಿಗೆ ಏಕೆ ಬಂದಿದ್ದೀಯಾ ಎಂದು ಜೆಸಿಬಿ ಮೇಲೆ ಹತ್ತಿ ಮನ ಬಂದಂತೆ ಹಲ್ಲೆ ಮಾಡಿದರು. ನೀವು ನಮ್ಮ ಬೀದಿಗೆ ಬಂದರೆ ದೇವರಿಗೆ ಮೈಲಿಗೆಯಾಗುತ್ತದೆ ಎಂದು ಚಪ್ಪಲಿ ಹಾಕಿದ್ದ ಕಾಲಿನಿಂದ ಒದ್ದರು. ಅಸ್ವಸ್ಥನಾಗಿ ಬಿದ್ದರೂ ಯಾರೂ ನೀರು ಸಹ ಕೊಡಲಿಲ್ಲ, ಜೇಬಿನಲ್ಲಿದ್ದ ₹20 ಸಾವಿರ ಕಸಿದುಕೊಂಡರು. ದೇವಸ್ಥಾನಕ್ಕೆ ₹1 ಲಕ್ಷ ದಂಡ ಪಾವತಿಸಬೇಕು, ಇಲ್ಲದಿದ್ದರೆ ಬಟ್ಟೆ ಬಿಚ್ಚಿ ಬೀದಿಯಲ್ಲಿ ಮೆರವಣಿಗೆ ಮಾಡುತ್ತೇವೆ ಎಂದು ಎಳೆದು ತಂದು ಬೀದಿಯಿಂದ ಹೊರಗೆ ತಳ್ಳಿದರು’ ಎಂದು ಮಾರುತಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಆಧರಿಸಿ ಕುಮಾರ, ಓಂಕಾರಪ್ಪ, ಪದ್ಮಾ, ರಾಮಣ್ಣ, ಜಗದೀಶ, ಚಿತ್ರಪ್ಪ, ಶಂಕರಪ್ಪ, ರಾಜಪ್ಪ, ತಮ್ಮಯ್ಯ, ನಾಗರಾಜ, ಶಿವರಾಮ, ಅಭಿ, ಅಪ್ಪು, ಮಂಜುನಾಥ್, ಬಸವರಾಜ್ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT