ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಹೋಮ, ಹವನ ಮುಗಿಸಿ ಹಿಂದಿರುಗುವಾಗ ಸಿಎಂ ಬೆಂಗಾವಲು ವಾಹನ ಪಲ್ಟಿ: ಇಬ್ಬರಿಗೆ ಗಾಯ

Published:
Updated:

ಚಿಕ್ಕಮಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ತಾಲ್ಲೂಕಿನ ಆಲ್ದೂರು ಬಳಿಯ ಶಂಕರ್ ಫಾಲ್ಸ್ ಸಮೀಪ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಇನ್ ಸ್ಪೆಕ್ಟರ್ ಪ್ರದೀಪ್, ಚಾಲಕ ಗಾಯಗೊಂಡಿದ್ದಾರೆ.

ಸಂಜೆ 4.45ರ ಸುಮಾರಿಗೆ ಅವಘಡ ನಡೆದಿದೆ. ಇಬ್ಬರಿಗೂ ಸಣ್ಣಪುಟ್ಟ ಪೆಟ್ಟಾಗಿದೆ. ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕುಟುಂಬದವರು ಕೊಪ್ಪ ತಾಲ್ಲೂಕಿನ ಕಮ್ಮರಡಿ ಬಳಿ ಕುಡಿನಲ್ಲಿಯ ಸಮೀಪ ತುಂಗಾ ತಟದಲ್ಲಿ ಉಮಾಮಹೇಶ್ವರ ದೇಗುಲದಲ್ಲಿ ಹೋಮ, ಹವನ ಕೈಂಕರ್ಯ  ಮುಗಿಸಿಕೊಂಡು ವಾಪಸ್ ತೆರಳುವಾಗ, ಹಿಂಗಾವಲಿನಲ್ಲಿದ್ದ ಜೀಪು ಉರುಳಿಬಿದ್ದಿದೆ.

Post Comments (+)