ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಡು ಕುರಿ ಮಾಂಸ ಶೇಖರಣೆ ಆರೋಪ; ಇಬ್ಬರ ಬಂಧನ

Published 23 ಫೆಬ್ರುವರಿ 2024, 13:38 IST
Last Updated 23 ಫೆಬ್ರುವರಿ 2024, 13:38 IST
ಅಕ್ಷರ ಗಾತ್ರ

ಜಯಪುರ( ಬಾಳೆಹೊನ್ನೂರು): ಇಲ್ಲಿಗೆ ಸಮೀಪದ ದೂಬ್ಳದ ಬಳಿ ಕಾಡು ಪ್ರಾಣಿಯ ಮಾಂಸ ಸಂಗ್ರಹಿಸಿಟ್ಟಿದ್ದ  ಆರೋಪದಡಿ  ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಎಲೆಮಡಲು ಗ್ರಾಮದ ದೂಬಳ ಸುಂಕದಗದ್ದೆ ರಸ್ತೆಯ ವಿಜೇಂದ್ರ ನಾಯ್ಕ ಹಾಗೂ ವಿಶ್ವನಾಥ ಬಂಧಿತ ಆರೋಪಿಗಳು. ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ಕಾಡುಕುರಿಯ ಮಾಂಸವನ್ನು ಮನೆಯಲ್ಲಿ ಶೇಖರಿಸಿ ಇಟ್ಟಿದ್ದ ಆರೋಪದ ಅಡಿಯಲ್ಲಿ ವಿಜೇಂದ್ರ ನಾಯ್ಕ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ವಿಶ್ವನಾಥ ಅವರ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂದಿಸಲಾಗಿದೆ. ಆರೋಪಿ ಮನೆಯಿಂದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಿ.ಟಿ.ರಂಗನಾಥ್, ಉಪ ವಲಯ ಅರಣ್ಯಾಧಿಕಾರಿ.ಯು.ಎನ್.ರಘು, ಎಸ್.ದಿವಾಕರ್.ಎಸ್ ಶಿವರುದ್ರಪ್ಪ, ಬಿ.ಟಿ.ದಿನೇಶ್, ಬಿ.ಆರ್.ಕಿರಣ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT