ಭಾನುವಾರ, ಆಗಸ್ಟ್ 1, 2021
21 °C

ಅಮೃತ್ ಮಹಲ್ ಕೇಂದ್ರದಲ್ಲಿ ಉರುಳಿಸಿದ್ದ ಮರಗಳ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ಪಟ್ಟಣದ ಅಮೃತ್ ಮಹಲ್ ಕೇಂದ್ರದಲ್ಲಿ ಉರುಳಿಸಿದ್ದ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ವಶಕ್ಕೆ ಪಡೆದರು.

ಅರಣ್ಯಾಧಿಕಾರಿ ಮಹೇಶ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿದರು. ಉರುಳಿದ್ದ ಮರ ಪರಿಶೀಲಿಸಿ ದರು. ಕಟಾವಾಗಿದ್ದ ಮರಗಳನ್ನು ಇಲಾಖೆಯ ವಶಕ್ಕೆ ಪಡೆದರು.

‘ಇಲಾಖೆಯಿಂದ ಅನುಮತಿ ಪಡೆಯದೆ ಮರ ತೆರವುಗೊಳಿಸಿದ್ದ ಕೇಂದ್ರದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಅವರು ತಿಳಿಸಿದರು.

ಅಮೃತ್ ಮಹಲ್ ಕೇಂದ್ರದಲ್ಲಿ ಅಧಿಕಾರಿಗಳೇ ಮುಂದೆ ನಿಂತು ಕೆಲವು ಮರಗಳನ್ನು ನೆಲಕ್ಕುರುಳಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಶನಿವಾರ ‘ಅಮೃತ್ ಮಹಲ್ ಕೇಂದ್ರದಲ್ಲಿ ಮರಗಳ ಹನನ’ ತಲೆಬರಹದಡಿ ವರದಿ ಪ್ರಕಟವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು