ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರು ವರ್ಷದ ಗರಿಷ್ಠಕ್ಕೆ ಏರಿದ ಧಾರಣೆ: ಕೆ.ಜಿ ಕಾಳುಮೆಣಸಿನ ದರ ₹660

l 2018ರ ದಾಖಲೆ ಬೆಲೆಯ ನಿರೀಕ್ಷೆ
Published 8 ಜೂನ್ 2024, 23:42 IST
Last Updated 8 ಜೂನ್ 2024, 23:42 IST
ಅಕ್ಷರ ಗಾತ್ರ

ಕಳಸ (ಚಿಕ್ಕಮಗಳೂರು): ಮಲೆನಾಡಿ ನಲ್ಲಿ ಕಾಫಿ ನಂತರ ಕಾಳುಮೆಣಸು ಬೆಲೆ ಕೂಡ ಏರಿಕೆಯ ಹಾದಿಯಲ್ಲಿದ್ದು, ಬೆಳೆಗಾರರು ಭಾರಿ ನಿರೀಕ್ಷೆಯಲ್ಲಿದ್ದಾರೆ. ಕೆ.ಜಿ ಕಾಳುಮೆಣಸು ಶನಿವಾರ ₹660ಕ್ಕೆ ಮಾರಾಟ ಆಗಿದ್ದು ಕಳೆದ 6 ವರ್ಷಗಳಲ್ಲಿ ಇದು ಗರಿಷ್ಠ ಧಾರಣೆ. 2018ರಲ್ಲಿ ಕೆ.ಜಿ ಕಾಳುಮೆಣಸಿನ ಬೆಲೆ ₹780ಗೆ ತಲುಪಿತ್ತು.

ಫೆಬ್ರುವರಿಯಲ್ಲಿ ಕಾಳುಮೆಣಸು ಕೊಯ್ಲು ನಡೆಯುತ್ತಿದ್ದಾಗ ಕೆ.ಜಿಗೆ ₹525ರ ಆಸುಪಾಸಿನಲ್ಲಿ ಇದ್ದ ಧಾರಣೆ ಈಚೆಗೆ 2 ವಾರಗಳಿಂದ ಸತತ ಏರುಗತಿಯಲ್ಲಿದೆ.  2018ರ ಹಂತಕ್ಕೆ ಬೆಲೆ ತಲುಪುವುದೇ ಎಂಬ
ಕುತೂಹಲದಲ್ಲಿದ್ದಾರೆ ಬೆಳೆಗಾರರು.

ಕಾಫಿ ಮತ್ತು ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಬೆಳೆಯುತ್ತಿದ್ದ ಕಾಳುಮೆಣಸಿಗೆ ಈಚೆಗೆ ವಿಶೇಷ ಆರೈಕೆ ಮಾಡಿದ್ದಕ್ಕೆ ಫಲ ಸಿಗುವ ಭರವಸೆ ಯಲ್ಲಿದ್ದಾರೆ ಅವರು.

ವಿಯೆಟ್ನಾಂನಲ್ಲಿ ಪ್ರತಿಕೂಲ ಹವಾಮಾನದ ಕಾರಣ ರೊಬಸ್ಟಾ ಕಾಫಿ ಹಾಗೂ ಕಾಳುಮೆಣಸಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ಏರುತ್ತಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸಿನ ಬೆಳೆಯುತ್ತಿದ್ದು, ಈ ಪೈಕಿ ಶೇ 50ಕ್ಕೂ ಹೆಚ್ಚು ಕರ್ನಾಟಕದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಕೊಡುಗೆ ಎಂದು ಹೇಳುತ್ತಾರೆ.

2019ರಲ್ಲಿ 2.8 ಲಕ್ಷ ಟನ್‍ಗೂ ಹೆಚ್ಚು ಕಾಳುಮೆಣಸು ಬೆಳೆದಿದ್ದ ವಿಯೆಟ್ನಾಂನಲ್ಲಿ ಈ ವರ್ಷ ಅಂದಾಜು 1.8 ಲಕ್ಷ ಟನ್‍ ಇಳುವರಿ ಲಭಿಸಿದೆ. ಭಾರತದ ಕಾಳುಮೆಣಸು ಉತ್ತಮ ಗುಣಮಟ್ಟ ಹೊಂದಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟನ್‍ಗೆ 8,000 ಡಾಲರ್ ಬೆಲೆ ಇದೆ. ಬ್ರೆಜಿಲ್‌ನಿಂದ ಸಾಗುವ ಕಾಳುಮೆಣಸಿಗೆ 7,700 ಡಾಲರ್‌ ಸಿಕ್ಕಿದರೆ, ವಿಯೆಟ್ನಾಂ ಮೆಣಸಿಗೆ 6,500 ಡಾಲರ್ ಮತ್ತು ಮಲೇಷ್ಯಾ ಮೆಣಸಿಗೆ 4,900 ಡಾಲರ್ ಬೆಲೆ ಇದೆ.

ದೇಶದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸಿನ ಬೆಳೆ ಕಾಳುಮೆಣಸಿಗೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟನ್‍ಗೆ 8,000 ಡಾಲರ್ ದರ 2018ರಲ್ಲಿ ₹780ಗೆ ತಲುಪಿದ್ದ ಕೆ.ಜಿ ಕಾಳುಮೆಣಸಿನ ಬೆಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT