ಕೊಟ್ಟಿಗೆಹಾರ: ಇಲ್ಲಿನ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ, ಮಂಗಳೂರಿನಿಂದ ಬರುತ್ತಿದ್ದ ಕಾರಿನಲ್ಲಿ ರಾಮನಗರದ ವ್ಯಕ್ತಿಯೊಬ್ಬರ ಬಳಿ ಇದ್ದ ದಾಖಲೆ ₹1 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಬಿಗಿಗೊಳಿಸಲಾಗಿದ್ದು, ಅಧಿಕಾರಿಗಳು ಹಗಲು –ರಾತ್ರಿ ಪಾಳಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಸೋಮೆಗೌಡ ಭೇಟಿ ನೀಡಿ ಪರಿಶೀಲಿಸಿದರು. ತನಿಖಾಧಿಕಾರಿ ಮಂಜುನಾಥ್, ಬಣಕಲ್ ಠಾಣಾ ಪಿಎಸ್‍ಐ ಜಂಬೂರಾಜ್ ಮಹಾಜನ್, ಎಸ್‌ಐ ರನ್ನ ಗೌಡ ಪಾಟೀಲ್ ಎಎಸ್‍ಐ ಕೆ. ಶಶಿ, ಧಫೇದಾರ್ ಜಾಫರ್ ಷರೀಪ್, ಸಿಬ್ಬಂದಿ ಜಗದೀಶ್, ಗಿರೀಶ್, ಸಂತೋಷ್, ಮಾಲತೇಶ್, ಸಚ್ಚಿನ್, ಬಣಕಲ್ ಗ್ರಾ.ಪಂ ಕಾರ್ಯದರ್ಶಿ ನಾಣಯ್ಯ ಇದ್ದರು.
‘ಯಾತ್ರಾಸ್ಥಳಕ್ಕೆ ಬರುವ ಪ್ರವಾಸಿಗರು ಪ್ರವಾಸ ಖರ್ಚಿಗೆ ಹಣ ಇಟ್ಟುಕೊಂಡು ಬಂದಿರುತ್ತಾರೆ. ಇದನ್ನು ವಶ ಪಡಿಸಿಕೊಂಡಿರುವುದು ಬೇಸರ ಉಂಟು ಮಾಡಿದೆ’ ಎಂದು ರಾಮನಗರದ ಪ್ರವಾಸಿಗರು ಪ್ರಜಾವಾಣಿಗೆ ತಿಳಿಸಿದ್ದಾರೆ.
ಕೊಟ್ಟಿಗೆಹಾರ ಚೆಕ್‍ಪೋಸ್ಟ್‌ನಲ್ಲಿ ವೀಡಿಯೊ ಚಿತ್ರೀಕರಣ ಮಾಡಲಾಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸುದೀರ್ ಕಡಿದಾಳು ಆರೋಪಿಸಿದ್ದಾರೆ.
ಬ್ಯಾನರ್ ತೆರವು
ನರಸಿಂಹರಾಜಪುರ: ಚುನಾವಣಾ ಮಾದರಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬುಧವಾರ ಹಾಗೂ ಗುರುವಾರ ಕಾರ್ಯಾಚರಣೆ ನಡೆಸಿ ಪಟ್ಟಣದ ವಿವಿಧ ಭಾಗಗಳಲ್ಲಿ ಕಟ್ಟಿದ್ದ ಬ್ಯಾನರ್, ಬಂಟಿಗ್ಸ್ ತೆರವುಗೊಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ, ಅಂಬೇಡ್ಕರ್ ಭವನದ ತಡೆಗೋಡೆ, ಪ್ರವಾಸಿಮಂದಿರಸ ಸಮೀಪ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪದಲ್ಲಿ ಹಾಕಲಾಗಿದ್ದ ಸರ್ಕಾರದ ಹಾಗೂ ಖಾಸಗಿ ಜಾಹಿರಾತು ಹೊಂದಿದ್ದ ನಾಮಫಲಕ, ಫ್ಲೆಕ್ಸ್, ಬಂಟಿಂಗ್ ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಬಾವುಟಗಳನ್ನು ತೆರವುಗೊಳಿಸಿದರು. ಬಸ್ ನಿಲ್ದಾಣಗಳಿಗೆ ಅಳವಡಿಸಿದ್ದ ರಾಜಕೀಯ ವ್ಯಕ್ತಿಗಳ ಪೋಟೊ ಇರುವ ನಾಮಫಲಕವನ್ನು ಬಟ್ಟೆ ಹಾಕಿ ಮುಚ್ಚಲಾಯಿತು. ಉದ್ಘಾಟನೆ ಹಾಗೂ ಶಂಕುಸ್ಥಾಪನೆಯಾದ ಸ್ಥಳದಲ್ಲಿ ಹಾಕಲಿದ್ದ ನಾಮಫಲಕಗಳನ್ನು ಕಾಗದ ಅಂಟಿಸಿ ಮುಚ್ಚಲಾಗಿದೆ.
ಪಟ್ಟಣ ಪಂಚಾಯಿತಿ ಆರೋಗ್ಯ ಅಧಿಕಾರಿ ವಿಜಯಕುಮಾರ್, ಪೌರಕಾರ್ಮಿಕ ತಮ್ಮಣ್ಣ ಹಾಗೂ ಪೌರ ಕಾರ್ಮಿಕರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.