ಗುರುವಾರ , ಫೆಬ್ರವರಿ 2, 2023
27 °C

ಜುಂಜಪ್ಪ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ತಾಲ್ಲೂಕಿನ ಬಾಳಯ್ಯನ ಹೊಸೂರು ಗ್ರಾಮದಲ್ಲಿ ಮಂಗಳವಾರ ಜುಂಜಪ್ಪ ಸ್ವಾಮಿ ಜಾತ್ರಾ ಮಹೋತ್ಸವವು ನೂರಾರು ಭಕ್ತರ ಸಂಭ್ರಮ-ಸಡಗರ ಮತ್ತು ಭಕ್ತಿ-ಭಾವದ ನಡುವೆ ನಡೆಯಿತು.

ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತರು ದೇವರ ದರ್ಶನ ಪಡೆದು, ಹೂ-ಹಣ್ಣು ಅರ್ಪಿಸಿದರು. ದುಗ್ಗಲ ಹೊತ್ತು ಹರಕೆ ತೀರಿಸಿದರು. ‘ಜಾತ್ರೆಗೆ ಬಂದು, ದೇವರ ದರ್ಶನ ಪಡೆದು ಹೋದರೆ ಹುಳು-ಹುಪ್ಪಟೆ ಕಾಟ ತಪ್ಪುತ್ತದೆ. ಜಾನುವಾರುಗಳು ಆರೋಗ್ಯವಾಗಿರುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಪ್ರತಿ ವರ್ಷವೂ ಜಾತ್ರೆ ವೇಳೆ ಮಕ್ಕಳ ಸಮೇತ ಬರುತ್ತೇವೆ’ ಎನ್ನುತ್ತಾರೆ ನಾರಣಾಪುರದ ಭಾಗ್ಯಮ್ಮ.

ಜಾತ್ರೆಗೆ ಬಸ್ ವ್ಯವಸ್ಥೆ ಇಲ್ಲದ ಹಿನ್ನೆಲೆ, ಭಕ್ತರು ಬೈಕ್, ಆಟೊ ಕಾರುಗಳ ಮೊರೆ ಹೋಗಿದ್ದರು. ಅನ್ನ ಸಂತರ್ಪಣೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು