ಮಂಗಳವಾರ, ಜುಲೈ 27, 2021
24 °C

ಚಿಕ್ಕಮಗಳೂರು| ಎನ್‌ಎಂಸಿ ವೃತ್ತದಲ್ಲಿನ ಮಲ್ನಾಡ್ ಟೈರ್ ಮಳಿಗೆಯಲ್ಲಿ ಅಗ್ನಿ ಅವಘಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

fire accident

ಚಿಕ್ಕಮಗಳೂರು: ನಗರದ ಐಜಿ ರಸ್ತೆಯ ಎನ್ಎಂಸಿ ವೃತ್ತದಲ್ಲಿನ ಮಲ್ನಾಡ್ ಟೈರ್ಸ್ ಮಳಿಗೆಯಲ್ಲಿ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡು, ಮಳಿಗೆಯಲ್ಲಿದ್ದ ವಸ್ತುಗಳು ಸುಟ್ಟಿವೆ.

ನಾಲ್ಕು ಅಂತಸ್ತಿನ ಈ ಕಟ್ಟಡದ  ಮುಂಭಾಗದ ಮಳಿಗೆಗಳಲ್ಲಿದ್ದ ವಸ್ತುಗಳು ಬಹುತೇಕ ನಾಶವಾಗಿವೆ. ಟೈರು, ಟ್ಯೂಬು, ಪೀಠೋಪಕರಣ, ಇತರ ಸಾಮಾನುಗಳು ಸುಟ್ಟು ಕರಕಲಾಗಿವೆ.ಅಗ್ನಿಶಾಮಕ ಸಿಬ್ಬಂದಿ ಬೆಳಿಗ್ಗೆ 5ಗಂಟೆಯಿಂದ ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. 

ಈ ಕಟ್ಟಡದ ಮೂರನೇ ಹಂತಸ್ತಿನಲ್ಲಿ ಐಸಿಐಸಿಐ ವಿಮಾ ಕಚೇರಿ ಇದ್ದು, ಕಚೇರಿಯ ಕೆಲ ವಸ್ತುಗಳು ಸುಟ್ಟಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು