ಚಿಕ್ಕಮಗಳೂರು: ಜಿಲ್ಲೆಯಲ್ಲಿ ರಚನೆಗೊಂಡ ಚಿಕ್ಕಮಗಳೂರು ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಥಮ ಸಭೆ ನಗರದ ಜಿ.ಕೆ. ಪ್ಯಾಲೇಸ್ ಸಭಾಭವನದಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ ಸಮುದಾಯದ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಮಹಮ್ಮದ್, ‘ಜಿಲ್ಲೆಯಲ್ಲಿ ಮುಸ್ಲಿಮರಿಗೆ ನಿರೀಕ್ಷೆಗೆ ತಕ್ಕ ಸ್ಪಂದನೆ ಸಿಗುತ್ತಿಲ್ಲ ಎಂಬ ನೋವು ಸಮಾಜದಲ್ಲಿದೆ. ಸಮಸ್ಯೆಗಳ ಪರಿಹಾರಕ್ಕೆ ಯಾರ ಬಳಿ ಹೋಗಬೇಕು ಎಂಬುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಒಕ್ಕೂಟ ರಚಿಸಲಾಗಿದೆ’ ಎಂದರು.

‘ಶಾಸಕಿ ನಯನಾ ಮೋಟಮ್ಮ ಮೂಡಿಗೆರೆಯಲ್ಲಿ ಕೋಮುವಾದಿಯೊಬ್ಬರು ಭಾಗವಹಿಸಿದ ಸಭೆಯಲ್ಲಿ ಮಾತನಾಡಿ ಆ ಮುಖಂಡನನ್ನು ಸ್ವಾಗತಿಸಿರುವುದು ಪುಣ್ಯ ಎಂದು ಭಾವಿಸಿದ್ದೇನೆ ಎಂದಿದ್ದರು. ಮುಖಂಡನನ್ನು ತಮ್ಮ ತಾಯಿ ಕ್ಷೇತ್ರಕ್ಕೆ ಕಾಲಿಡಲು ಬಿಟ್ಟಿರಲಿಲ್ಲವೆಂದೂ ತಮಗೆ ಇನ್ನೂ 3 ವರ್ಷದ ಅಧಿಕಾರಾವಧಿ ಇದ್ದು ಯಾವ ಪಕ್ಷಕ್ಕೆ ಹೋಗುವುದಾಗಿ ಹೇಳಲು ಸಾಧ್ಯವಿಲ್ಲವೆಂದೂ ಹೇಳಿದ್ದರು. ಪಕ್ಷವೊಂದರ ಚಿಹ್ನೆಯಲ್ಲಿ ಸ್ಪರ್ಧಿಸಿ ಗೆದ್ದ ಅವರು ಭಾಷಣದಲ್ಲಿ ಕೋಮುವಾದಿಯನ್ನು ಕೊಂಡಾಡಿದ್ದಾರೆ. ಅದೇ ಸಭೆಯಲ್ಲಿ ಆ ಮುಖಂಡ ಮುಸ್ಲಿಮರ ಬಗ್ಗೆ ದ್ವೇಷ ಕಾರಿದ್ದರು’ ಎಂದು ಮಹಮ್ಮದ್ ಹೇಳಿದರು.

‘ಶಾಸಕಿ ವರ್ತನೆಯ ಬಗ್ಗೆ ಬೇಸರಗೊಂಡ ಮೂಡಿಗೆರೆಯ ಮುಸ್ಲಿಂ ಮುಖಂಡರು ಸಭೆ ಸೇರಿ ಅಲ್ಲಿಗೆ ಕರೆದರೆ, ಬ್ಲ್ಯಾಕ್ಮೇಲ್ ಮಾಡುತ್ತೀರಾ ಎಂದು ಶಾಸಕಿ ಪ್ರಶ್ನಿಸಿದ್ದರು. ಅವರ ಬಗ್ಗೆ ಪಕ್ಷ ಕ್ರಮ ಕೈಗೊಳ್ಳಲಿಲ್ಲ. ಅವರನ್ನು ಉಚ್ಛಾಟಿಸಬೇಕಿತ್ತು. ಆದರೆ ಶಾಸಕರನ್ನು ಬೆಂಬಲಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಪತ್ರ ಬರೆದಿದ್ದಾರೆ. ಅವರಿಗೆ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಮುಸಲ್ಮಾನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಎಂ.ಎಲ್ ಮೂರ್ತಿ ಅವರಂಥ ಮುಖಂಡರನ್ನು ಮೂಲೆಗುಂಪು ಮಾಡಲಾಗಿದೆ’ ಎಂದು ಮಹಮ್ಮದ್ ಆರೋಪಿಸಿದರು.

‘ಮುಸ್ಲಿಂ ಸಮಾಜದ ಬಗ್ಗೆ ಅಸಡ್ಡೆ ಮುಂದುವರಿದರೆ ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು’ ಎಂದ ಅವರು ಅನುದಾನ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಲಿಲ್ಲ. ಶೇ 4ರಷ್ಟು ಮೀಸಲಾತಿ ಈ ಹಿಂದಿನ ಸರ್ಕಾರ ರದ್ದುಗೊಳಿಸಿದ್ದು ಅದನ್ನು ಮತ್ತೆ ಜಾರಿಗೊಳಿಸಲು ಈಗಿನ ಸರ್ಕಾರ ಮುಂದಾಗಲಿಲ್ಲ’ ಎಂದರು.

ಮುಖಂಡ ಸಿ.ಎನ್ ಅಕ್ಮಲ್ ಮಾತನಾಡಿ ‘ಗತಿ ಇಲ್ಲದೆ ನಮಗೆ ಮತ ನೀಡುತ್ತಾರೆಂದುಕೊಂಡವರು ಇದ್ದಾರೆ. ಮಂತ್ರಿಯಾಗಲು ಧರ್ಮದ ವಿಷಯ ಮಾತನಾಡುತ್ತಾರೆ. ಪ್ರತಿ ತಾಲ್ಲೂಕಿನಲ್ಲೂ ಮುಸ್ಲಿಮರ ಸಂಖ್ಯಾಬಲವಿದೆ. ಅದರೂ ಪ್ರಾತಿನಿಧ್ಯ ಇಲ್ಲ. ಇದ್ದಿದ್ದರೆ ನಮ್ಮವರು ಹೆಚ್ಚು ಸಂಖ್ಯೆಯಲ್ಲಿ ಶಾಸಕರಾಗುತ್ತಿದ್ದರು’ ಎಂದರು.

ಮುಖಂಡರಾದ ಕಿರುಗುಂದ ಅಬ್ಬಾಸ್, ಮೂಡಿಗೆರೆಯ ಸಿ.ಕೆ ಇಬ್ರಾಹಿಂ, ಕೊಪ್ಪದ ಇಜಾಸ್ ಅಹಮ್ಮದ್ ಜಾಕಿರ್ಹೊರಟಿ, ಅತೀಕ್ ಕೈಸರ್ ಇಬ್ರಾಹಿಂ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.