ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಮಳೆ ಬಹುತೇಕ ರಸ್ತೆಗಳನ್ನು ಹಾಳು ಮಾಡಿದೆ. ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಸಿರುವ ವಿವಿಧ ಇಲಾಖೆಗಳು, ಮಳೆ ಇಲ್ಲದ ಏಳು ಒಣ ದಿನಗಳಿಗಾಗಿ ಕಾದಿದ್ದಾರೆ.

ಮಾರ್ಚ್ನಿಂದ ಆರಂಭವಾದ ಮಳೆ, ಬಿಟ್ಟು ಬಿಡದೆ ಸುರಿಯುತ್ತಿದೆ. ನಗರದಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಸಂಚರಿಸಲು ಯೋಗ್ಯವಿಲ್ಲದ ಮಟ್ಟಗೆ ಹಾಳಾಗಿವೆ. ನಾಯ್ಡು ಬೀದಿ, ಬೈಪಾಸ್ ಸಂಪರ್ಕ ರಸ್ತೆ (ದೀಪಾ ನರ್ಸಿಂಗ್ ಹೋಂ ರಸ್ತೆ), ಬಸವನಹಳ್ಳಿ ಮುಖ್ಯರಸ್ತೆ, ವಿಜಯಪುರ ರಸ್ತೆ, ಉಂಡೇದಾಸರಹಳ್ಳಿ ರಸ್ತೆ ಸೇರಿ ಪ್ರಮುಖ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಷ್ಟು ಹಾಳಾಗಿವೆ.

ಇವುಗಳ ಪೈಕಿ ನಾಯ್ಡು ಬೀದಿಯಲ್ಲಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗಿತ್ತು. ಕಳೆದ ತಿಂಗಳು ಭೇಟಿ ನೀಡಿದ್ದ ಉಪಲೋಕಾಯುಕ್ತರು ಸಂಚರಿಸಬಹುದಾದ ರಸ್ತೆಯಾಗಿದ್ದರಿಂದ ಗುಂಡಿ ಮುಚ್ಚಲಾಗಿತ್ತು. ಆದರೂ, ಅವರಿಗೆ ಜಿಲ್ಲೆಯ ರಸ್ತೆಗಳ ಸ್ಥಿತಿ ಅರಿವಿಗೆ ಬಂದಿದ್ದು, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಸನದಿಂದ ಚಿಕ್ಕಮಗಳೂರಿಗೆ ಬೇಲೂರು ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಹೇಳ ತೀರದಾಗಿದ್ದು, ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರ ಅಸಮಾಧಾನಕ್ಕೂ ಕಾರಣವಾಗಿತ್ತು.

ನಗರದ ಕೆಲ ರಸ್ತೆಗಳ ಅಭಿವೃದ್ಧಿಗೆ ನಗರಸಭೆ ಕ್ರಿಯಾ ಯೋಜನೆ ರೂಪಿಸಿದ್ದು, ಕಾಮಗಾರಿ ಆರಂಭಿಸಲು ಮುಂದಾಗಿತ್ತು. ಶಿಲಾನ್ಯಾಸ ನೆರವೇರಲು ನಿಗದಿಯಾಗಿದ್ದ ದಿನದಿಂದಲೇ ಮಳೆ ಆರಂಭವಾಗಿದ್ದರಿಂದ ಕಾಮಗಾರಿ ಆರಂಭವಾಗಿಲ್ಲ. ಇದರಿಂದಾಗಿ ಇಡೀ ಮಳೆಗಾಲದಲ್ಲಿ ಜನ ಗುಂಡಿಗಳ ನಡುವೆಯೇ ಜೀವನ ಸಾಗಿಸುವಂತಾಯಿತು.

ಬೇಸಿಗೆಯಲ್ಲಿ ಸುಮ್ಮನಿದ್ದ ನಗರಸಭೆ ಅಧಿಕಾರಿಗಳು ಮಳೆಗಾಲ ಆರಂಭದ ಹೊಸ್ತಿಲಲ್ಲಿ ಕಾಮಗಾರಿ ಆರಂಭಿಸಲು ಮುಂದಾದರು. ಮೊದಲೇ ಕಾಮಗಾರಿ ಆರಂಭಿಸಿದ್ದರೆ ಸಮಸ್ಯೆ ಇತ್ಯರ್ಥವಾಗುತ್ತಿತ್ತು. ಈಗ ಮಳೆಯ ನೆಪ ಹೇಳುತ್ತಿದ್ದಾರೆ ಎಂಬುದು ನಿವಾಸಿಗಳ ಬೇಸರ.

ಶಾಸಕರ ವಿಶೇಷ ಅನುದಾನ ಸೇರಿ ₹27.50 ಕೋಟಿ ಮೊತ್ತ ರಸ್ತೆ ಅಭಿವೃದ್ಧಿಗೆ ಸಿದ್ಧವಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದ್ದಾರೆ.

ಜಯಪುರದಲ್ಲಿ ರಸ್ತೆ ವಿಸ್ತರಣೆಯೂ ಸೇರಿ, ಜಯಪುರದಿಂದ ಕೊಪ್ಪದವರೆಗೆ ರಸ್ತೆ ಅಭಿವೃದ್ಧಿಗೆ ₹11ಕೋಟಿ ಬಿಡುಗಡೆಯಾಗಿದೆ. ಕೊಪ್ಪದಿಂದ ನರಸಿಂಹರಾಜಪುರ ತಾಲ್ಲೂಕು ಕೊರಲುಕೊಪ್ಪ ತನಕ ರಸ್ತೆ ಅಭಿವೃದ್ಧಿಗೆ ₹19 ಕೋಟಿ ಬಿಡುಗಡೆಯಾಗಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.

ಹಲವು ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪೂರ್ಣಗೊಂಡಿದ್ದು ಕಾಮಗಾರಿ ಆರಂಭಿಸಲು ಮಳೆ ಇಲ್ಲದ ಕನಿಷ್ಠ ಏಳು ಒಣದಿನಗಳ ಬೇಕು ಎಂದು ಎಂಜಿನಿಯರ್ಗಳು ಹೇಳುತ್ತಿದ್ದಾರೆ. ಮಳೆ ಬಿಡುವು ನೀಡುವುದನ್ನು ಕಾಯುತ್ತಿದ್ದೇವೆ
. ಮೀನಾ ನಾಗರಾಜ್ ಜಿಲ್ಲಾಧಿಕಾರಿ

ಮೂಡಿಗೆರೆ: ₹75 ಕೋಟಿ ಮೊತ್ತದ ಕಾಮಗಾರಿ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ₹75 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ‘ಕ್ಷೇತ್ರ ವ್ಯಾಪ್ತಿಯ ಬಹುತೇಕ ಪ್ರಮುಖ ರಸ್ತೆಗಳ ಅಭಿವೃದ್ಧಿಯಾಗಲಿದೆ. ಆಲ್ದೂರು–ಬಾಳೆಹೊನ್ನೂರು ರಸ್ತೆಯೂ ಅಭಿವೃದ್ಧಿಯಾಗಲಿದೆ. ಈ ರಸ್ತೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ₹25 ಕೋಟಿ ಮೊತ್ತದಲ್ಲಿ ಅಭಿವೃದ್ಧಿಯಾಗಲಿದೆ. ಒಟ್ಟಾರೆ ₹90 ಕೋಟಿ ಮೊತ್ತದ ಕಾಮಗಾರಿ ಇದಾಗಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

₹13 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಪೂರ್ಣ

ಶಾಸಕರ ವಿಶೇಷ ಅನುದಾನದಲ್ಲಿ ₹10 ಕೋಟಿ ಮೊತ್ತದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾರ್ಯಾದೇಶ ಕೂಡ ನೀಡಲಾಗಿದೆ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು. 15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹3 ಕೋಟಿ ಮೊತ್ತದ ಕಾಮಗಾರಿ ಆರಂಭಕ್ಕೆ ಬಾಕಿ ಇದೆ. ಶಂಕರಪುರದಿಂದ ಬೈಪಾಸ್ ಸಂಪರ್ಕಿಸುವ ರಸ್ತೆ ನಾಯ್ಡು ಬೀದಿ ವಿಜಯಪುರ ರಸ್ತೆ ಬಸವನಹಳ್ಳಿ ಮುಖ್ಯರಸ್ತೆಯಿಂದ ಒಕ್ಕಲಿಗರ ಕಲ್ಯಾಣ ಮಂಟಪ ತಲುಪುವ ರಸ್ತೆ ಉಂಡೇದಾಸರಹಳ್ಳಿ ಮುಖ್ಯರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.