ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆ: ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಕಾಫಿ ಹೂ

Published 28 ಏಪ್ರಿಲ್ 2024, 16:04 IST
Last Updated 28 ಏಪ್ರಿಲ್ 2024, 16:04 IST
ಅಕ್ಷರ ಗಾತ್ರ

ತರೀಕೆರೆ: ಅಲ್ಲಲ್ಲಿ ಒಂದೆರಡು ಮಳೆ ಲಭಿಸಿದ್ದು, ಕಾಫಿ ತೋಟಗಳಲ್ಲಿ ಕಾಫಿ ಹೂವು ಅರಳಿದೆ. ಪಟ್ಟಣದಿಂದ ಸಂತವೇರಿ ಮಾರ್ಗವಾಗಿ ಚಿಕ್ಕಮಗಳೂರು ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಸ್ತೆಯ ಇಕ್ಕೆಲಗಳಲ್ಲಿ ಕಾಫಿ ಹೂವಿನ ಪರಿಮಳ ಸವಿಯುವುದು ಮತ್ತು ಸೌಂದರ್ಯ ಆಸ್ವಾದಸಿವುದು ನಯನ ಮನೋಹರ ದೃಶ್ಯವಾಗಿದೆ, ತೋಟಗಳಲ್ಲಿ ಮಲ್ಲಿಗೆ ಹೂವಿನ ರಾಶಿ ಚೆಲ್ಲಿದಂತೆ ಕಾಣುತ್ತಿದೆ.

ತರೀಕೆರೆ ತಾಲ್ಲೂಕು, ಲಿಂಗದಹಳ್ಳಿ ಹೋಬಳಿಯ ಹಲವು ಪ್ರದೇಶಗಳಲ್ಲಿ ಕಾಫಿ ತೋಟಗಳಿವೆ. ಈ ಬಾರಿ  ಬಿರು ಬಿಸಿಲಿನಿಂದಾಗಿ ತೋಟಗಳಿಗೆ ನೀರಿನ ಕೊರತೆ ಎದುರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಳೆದ ವಾರ ಸುರಿದ ಮಳೆಯಿಂದಾಗಿ ತೋಟದಲ್ಲಿ ಹೂವು ಅರಳಿವೆ. ಕಾಫಿ  ಗಿಡದ ತುಂಬಾ ಹೂ ಬಿಟ್ಟಿರುವುದರಿಂದ ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆ ಇದೆ ಎನ್ನುತ್ತಾರೆ ಬೆಳೆಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT