ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಗೆ ಪ್ರತಿಕೂಲ ಪರಿಸ್ಥಿತಿ’: ಡಾ. ಬಿ.ಎಲ್.ಶಂಕರ್

‘ಭಾರತ ಐಕ್ಯತಾ ಯಾತ್ರೆಯ ದಿವ್ಯ ನೆನಪುಗಳು’ ಸಂವಾದ ಕಾರ್ಯಕ್ರಮ
Last Updated 13 ನವೆಂಬರ್ 2022, 6:32 IST
ಅಕ್ಷರ ಗಾತ್ರ

ಕೊಪ್ಪ: ‘ಸಂವಿಧಾನಾತ್ಮಕವಾಗಿ ಸ್ಥಾಪಿಸಲಾದ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ, ಪ್ರಶ್ನೆ ಮಾಡುವವರನ್ನು ಹತ್ತಿಕ್ಕಲಾಗುತ್ತಿದೆ, ಪ್ರತಿಪಕ್ಷವೇ ಇಲ್ಲದ ಸ್ಥಿತಿ ನಿರ್ಮಾಣ ಮಾಡುವ ಕೆಲಸ ಆಡಳಿತ ಪಕ್ಷದಿಂದ ನಡೆಯುತ್ತಿದ್ದು, ಈಗ ಬಿಜೆಪಿ ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದೆ’ ಎಂದು ಮಾಜಿ ಸಭಾಪತಿ ಡಾ. ಬಿ.ಎಲ್.ಶಂಕರ್ ದೂರಿದರು.

ಹುಲುಮಕ್ಕಿಯಲ್ಲಿ ಶನಿವಾರ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ, ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಭಾರತ ಐಕ್ಯತಾ ಯಾತ್ರೆಯ ದಿವ್ಯ ನೆನಪುಗಳು, ವರ್ತಮಾನದ ಯಾತ್ರೆಯ ಅಗತ್ಯತೆ ಹಾಗೂ ಮುನ್ನೋಟ ಕುರಿತ ಸಂವಾದ, ಪ್ರಚಾರ ಪತ್ರ ಬಿಡುಗಡೆಯಲ್ಲಿ ಅವರು ಮಾತನಾಡಿದರು.

‘ಶೋಷಣೆ, ದಬ್ಬಾಳಿಕೆ, ನಿರುದ್ಯೋಗ ಪ್ರಸ್ತುತ ಏರುಗತಿಯಲ್ಲಿ ಸಾಗುತ್ತಿದೆ. ನೋಟು ಅಮಾನ್ಯೀಕರಣ, ಜಿ.ಎಸ್.ಟಿ ಜಾರಿ, ಲಾಕ್ ಡೌನ್ ನಿಂದಾಗಿ ಸಣ್ಣ ರೈತರು, ಹೋಟೆಲ್ ಉದ್ಯಮಿಗಳು, ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯವಾಗಿ ಹಮ್ಮಿಕೊಳ್ಳುವ ಭಾರತ್ ಜೋಡೊ ಯಾತ್ರೆಗೆ ರಾಷ್ಟ್ರ, ರಾಜ್ಯ, ಸ್ಥಳೀಯ ಸಮಸ್ಯೆಗಳನ್ನು ಜನರ ಮುಂದೆ ತೆರೆದಿಡುವ ಕೆಲಸ ಮಾಡಿ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಬಡವರಿಗೆ ಭೂಮಿ ಕೊಡುವ ಕಾನೂನು ರೂಪಿಸಿದರೆ, ಬಿಜೆಪಿ ಅದನ್ನು ಕಸಿದುಕೊಳ್ಳುವ ಕಾನೂನು ಜಾರಿಗೆ ತಂದಿದೆ. ಅರಣ್ಯ ಇಲಾಖೆ ಅನುಮತಿ ಪಡೆದು ಹಕ್ಕುಪತ್ರ ವಿತರಿಸಬೇಕು ಎಂಬುದನ್ನು ಜಿಲ್ಲಾಧಿಕಾರಿ ಮೂಲಕ ಕಾರ್ಯಗತಗೊಳಿಸುತ್ತಿದೆ’ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ನವೀನ್ ಮಾವಿನಕಟ್ಟೆ, ತಾಲ್ಲೂಕು ಸಂಚಾಲಕ ಅಮ್ಜದ್, ಮುಖಂಡರಾದ ಎಚ್.ಎಂ.ನಟರಾಜ್, ಎ.ಎಸ್.ನಾಗೇಶ್, ಕುಕ್ಕುಡಿಗೆ ರವಿ, ಎಚ್.ಎಂ.ಸತೀಶ್, ಅನ್ನಪೂರ್ಣ ನರೇಶ್, ಮೀಗಾ ಚಂದ್ರಶೇಖರ್, ಡಿ.ಎಸ್.ವಿಶ್ವನಾಥ ಶೆಟ್ಟಿ, ಯು.ಎಸ್.ಶಿವಪ್ಪ, ಬಿ.ಪಿ.ಚಿಂತನ್, ಡಿ.ಬಿ.ರಾಜೇಂದ್ರ, ಕೆ.ಟಿ.ಮಿತ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT