‘2 ದಿನದಲ್ಲಿ ಕಾರಣ ತಿಳಿಯಲಿದೆ’
'ನೀರಿನ ಟ್ಯಾಂಕ್ ಆಗಾಗ್ಗ ಸ್ವಚ್ಛಗೊಳಿಸಲಾಗುತ್ತದೆ. ನೀರು ಕಲುಷಿತಗೊಂಡಿದೆ ಎಂದು ಜನರಿಂದ ದೂರು ಬಂದ ಹಿನ್ನೆಲೆಯಲ್ಲಿ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅಶುದ್ಧ ನೀರು ಎಂದು ವರದಿ ಬಂದ ನಂತರ ಮತ್ತೊಮ್ಮೆ ಟ್ಯಾಂಕ್ ಸ್ವಚ್ಛಗೊಳಿಸಲಾಗುವುದು. ಮತ್ತೊಮ್ಮೆ ನೀರಿನ ಮಾದರಿ ಸಂಗ್ರಹಿಸಿ ಚಿಕ್ಕಮಗಳೂರಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಎರಡು ದಿನಗಳಲ್ಲಿ ವರದಿ ಬರಲಿದ್ದು, ನಂತರ ಕಲುಷಿತ ನೀರಿಗೆ ಕಾರಣ ತಿಳಿಯಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಚಂದ್ರಕಾಂತ್ 'ಪ್ರಜಾವಾಣಿ'ಗೆ ತಿಳಿಸಿದರು.