ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾದಿಂದ ಹೊಸ ಪಾಠ ಕಲಿಕೆ

ಶೃಂಗೇರಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಟಿ.ಡಿ.ಮಂಜುನಾಥ್
Last Updated 29 ಜೂನ್ 2020, 15:19 IST
ಅಕ್ಷರ ಗಾತ್ರ

ಶೃಂಗೇರಿ: ‘ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟವು ಒಂದು ಸವಾಲು. ಇಂದಿನ ಕೊರೊನಾ ಕಾಲವು ಬಯಸದೇ ಬಂದ ಕೆಟ್ಟ ದಿನ ಆಗಿದ್ದರೂ, ವೃತ್ತಿ ಜೀವನದಲ್ಲಿ ಹೊಸ ಪಾಠವನ್ನು ಕಲಿಯಲು ಸಾಧ್ಯವಾಯಿತು’ ಎನ್ನುತ್ತಾರೆ ಶೃಂಗೇರಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಟಿ.ಡಿ.ಮಂಜುನಾಥ್.

‘ಕೊರೊನಾ ವೈರಸ್‌ ಸೋಂಕಿನ ನಿಯಂತ್ರಣ ಆರೋಗ್ಯ ಕಾರ್ಯಕರ್ತರಿಗೆ ಒಂದು ದೊಡ್ಡ ಸವಾಲು. ತಾಳ್ಮೆಯೇ ದಿನನಿತ್ಯದ ಅಸ್ತ್ರ. ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ ಒಳಗಾದವರಿಗೆ ಎಷ್ಟೇ ಸೌಲಭ್ಯ ಮತ್ತು ಮಾಹಿತಿ ಕೊಟ್ಟರೂ, ಅವರನ್ನು 14 ದಿನ ಕಾಯು ವುದು ಕೂಡ ತಲೆನೋವಿನ ಕೆಲಸ. ಆದರೂ ನಮ್ಮ ಸಿಬ್ಬಂದಿ ನಿಷ್ಠೆಯಿಂದ ಮಾಡಿದ್ದಾರೆ’ ಎಂದು ಹೇಳುತ್ತಾರೆ.

ಹೊರ ರಾಜ್ಯಗಳಿಂದ ಬಂದವರು ನೇರವಾಗಿ ತಮ್ಮ ಮನೆಗೆ ಹೋದ ಸಂದರ್ಭದಲ್ಲಿ ತಕ್ಷಣ ಆ ಸ್ಥಳಕ್ಕೆ ಹೋಗಿ ಅವರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದೇವೆ. ಕೆಲವು ರಾಜ ಕೀಯ ಬಲಾಢ್ಯರ ಮನೆಗೆ ಹೋದಾಗ ಪ್ರತಿರೋಧವೂ ವ್ಯಕ್ತವಾಗಿ, ಅವರನ್ನು ಒಪ್ಪಿಸುವುದು ಹರಸಾಹಸ ಆಗುತ್ತಿತ್ತು.

ಲಾಕ್‍ಡೌನ್ ಆರಂಭದಲ್ಲಿ ವಿದೇಶಗಳಿಂದ ಬಂದಂತಹ ವ್ಯಕ್ತಿಗಳಿಗೆ ಮಾಹಿತಿ ನೀಡುವಿಕೆ, ಸೀಲ್ ಹಾಕಿ ಕ್ವಾರಂಟೈನ್‍ಗೆ ಒಳಪಡಿಸಿ ನಿತ್ಯ ಅವರ ಆರೋಗ್ಯ ತಪಾಸಣೆ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಮಾಡಿದ್ದಾರೆ. ಹೀಗಾಗಿ, ನಮ್ಮ ತಾಲ್ಲೂಕಿನಲ್ಲಿ ಮುಂಬೈನಿಂದ ಬಂದ 6 ಮಂದಿಗೆ ಮಾತ್ರ ಕೋವಿಡ್‌ ದೃಢಪಟ್ಟಿದ್ದು, ಎನ್ನುವಾಗ ಸ್ವಲ್ಪ ನೆಮ್ಮದಿಯಾಗುತ್ತದೆ.

ಕ್ವಾರಂಟೈನ್‌ನಲ್ಲಿ ಇದ್ದವರ ಗಂಟಲು ದ್ರವ ಮಾದರಿಯನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಿಕೊಡಬೇಕಾಗಿತ್ತು. ಒಂದೇ ದಿನ 14 ಮಂದಿ ಮುಂಬೈನಿಂದ ಬಂದಿದ್ದು, ಅವರ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರ ವರದಿ ಬರುವ ತನಕ ಆತಂಕ ಇತ್ತು. ಎಲ್ಲರ ವರದಿ ನೆಗೆಟಿವ್‌ ಬಂದ ಕಾರಣ ನಿಟ್ಟುಸಿರು ಬಿಟ್ಟೆವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT