ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಸಾವು; 69 ಮಂದಿಗೆ ಸೋಂಕು ಪತ್ತೆ

ಕೋವಿಡ್‌: 236 ಮಂದಿ ಗುಣಮುಖ
Last Updated 21 ಸೆಪ್ಟೆಂಬರ್ 2020, 16:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೋವಿಡ್‌–19 ತಗುಲಿದ್ದ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ. ಸೋಮವಾರ 69 ಮಂದಿಗೆ ಸೋಂಕು ದೃಢಪಟ್ಟಿದ್ದು, 236 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಚಿಕ್ಕಕುರುಬರಹಳ್ಳಿಯ 52 ವರ್ಷದ ಮಹಿಳೆ (ಪಿ–539132), ಇಂದಾವರ ಬಳಿಯ ಹುಕ್ಕುಂದದ 75 ವರ್ಷದ ಮಹಿಳೆ (ಪಿ–377327), ರಾಮನಹಳ್ಳಿಯ 60 ವರ್ಷದ ಮಹಿಳೆ (ಪಿ–525335) ಮೃತಪಟ್ಟವರು.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 34, ಕಡೂರು– 18, ತರೀಕೆರೆ–9, ಎನ್‌.ಆರ್‌.ಪುರ–3, ಕೊಪ್ಪ, ಶೃಂಗೇರಿ– ತಲಾ 2 ಹಾಗೂ ಮೂಡಿಗೆರೆ– ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 1316 ಸಕ್ರಿಯ ಪ್ರಕರಣಗಳು ಇವೆ. 5617 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 110ಮಂದಿ ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ. 2091 ನಿಯಂತ್ರಿತ ವಲಯಗಳು ಇವೆ.

ಕೊರೊನಾ ವೈರಾಣು ಪರೀಕ್ಷೆ ನಿಟ್ಟಿನಲ್ಲಿ ಸೋಮವಾರ 738 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಸೋಮವಾರದ ವರದಿಯಲ್ಲಿ 296 ಮಂದಿಗೆ ನೆಗೆಟಿವ್‌ ಬಂದಿದೆ.

2309 ಮಾದರಿಗಳ ಪರೀಕ್ಷೆ ವರದಿ ಬರಬೇಕಿದೆ. 726 ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ನಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT