ನರಸಿಂಹರಾಜಪುರ: ಕೇಂದ್ರ ಸರ್ಕಾರದ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತಾಲ್ಲೂಕಿನ ಕಸಬಾ ಹೋಬಳಿಯ ರೈತರು 2023-24 ನೇ ಸಾಲಿಗೆ ಹಣ ಪಾವತಿಸಿದ್ದರೂ, 2 ಗ್ರಾಮ ಪಂಚಾಯಿತಿ ಹೊರತು ಪಡಿಸಿ ಉಳಿದ ಗ್ರಾಮ ಪಂಚಾಯಿತಿಯ ರೈತರಿಗೆ ಪರಿಹಾರ ಬಂದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಆರೋಪಿಸಿದರು.

‘ಕಸಬಾ ಹೋಬಳಿಯ ಕಡಹಿನಬೈಲು ಹಾಗೂ ಮೆಣಸೂರು ಗ್ರಾಮ ಪಂಚಾಯಿತಿಯ ರೈತರಿಗೆ ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಬಂದಿದೆ. ಆದರೆ, ಮುತ್ತಿನಕೊಪ್ಪ, ಹೊನ್ನೇಕೊಡಿಗೆ, ಬಾಳೆ, ಗುಬ್ಬಿಗಾ ಗ್ರಾಮ ಪಂಚಾಯಿತಿಯ ನೂರಾರು ರೈತರು ಹವಮಾನ ಆಧಾರಿತ ಬೆಳೆ ವಿಮೆ ಮಾಡಿಸಿದ್ದರೂ, ಇದುವರೆಗೂ ಪರಿಹಾರ ಬಂದಿಲ್ಲ. ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಅಡಿಕೆಗೆ ಕೊಳೆ ರೋಗ ಬಂದು ಕಸಬಾ ಹೋಬಳಿಯಲ್ಲಿ ಶೇಕಡ 50ರಷ್ಟು ಅಡಿಕೆ ಫಸಲು ಹಾಳಾಗಿದೆ. ಗದ್ದೆ ಕೊಯ್ಲಿನ ಸಮಯದಲ್ಲಿ ಮಳೆ ಬಂದು ಭತ್ತ, ಹುಲ್ಲು ಹಾಳಾಗಿದೆ. ಆನೆ ಹಾವಳಿಯಿಂದಲೂ ಅಡಿಕೆ, ಬಾಳೆ, ಭತ್ತದ ಫಸಲು ಹಾಳಾಗಿದೆ. ಕೇಂದ್ರ ಸರ್ಕಾರದ ಹವಮಾನ ಆಧಾರಿತ ಬೆಳೆ ವಿಮೆಗೆ ರೈತರು ಕಷ್ಟು ಪಟ್ಟು ಹಣ ಕಟ್ಟಿದ್ದಾರೆ. ಬೆಳೆ ವಿಮೆ ಪರಿಹಾರವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.