ಕಂಚಿನಕಲ್ ದುರ್ಗದಿಂದ ಆಲ್ದೂರು ಮಾರ್ಗದ ಸೇತುವೆಗಳೆಲ್ಲ ಹಳೆಯದಾಗಿದ್ದು, ಕ್ರಷರ್ ಲಾರಿಗಳ ಸಂಚಾರದಿಂದ ಶಿಥಿಲಾವಸ್ಥೆ ತಲುಪಿವೆ. ಈ ಕುರಿತು ಲೋಕಾಯುಕ್ತರಿಗೂ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ
ಗುಡ್ಡದೂರು ರಘು,ಜೆಡಿಎಸ್ ಮುಖಂಡ,
ಯಾವುದೇ ಸ್ಫೋಟ ಮಾಡುವ ಮುನ್ನ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಕ್ರಷರ್‌ನವರು ಅನುಮತಿ ಪಡೆದಿಲ್ಲ ಅನುಮತಿ ಇಲ್ಲದೇ ಸ್ಫೋಟಕ ಬಳಸುವಾಗ ಜೀವ ಹಾನಿಗಳಾದರೆ ಯಾರು ಹೊಣೆ
ಅಜಯ್ ತಿಪ್ಪಯ್ಯ, ಯುನೈಟೆಡ್ ಪ್ಲಾಂಟೆಡ್ ಅಸೋಸಿಯೇಷನ್
ಕೆಂದಳ ಹಕ್ಲು ಕಲ್ಲು ಗಣಿಗಾರಿಕೆ ಕುರಿತು ಈಗಾಗಲೇ ಹಲವು ದೂರುಗಳು ಬಂದಿವೆ. ಕ್ರಷರ್‌ಗೆ ನೋಟಿಸ್ ನೀಡುವಂತೆ ತಾಲ್ಲೂಕು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ಸೂಚಿಸಲಾಗಿದೆ