ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲನ ಸಾಧಿಸುವ ಸವಾಲು: ಸಿ.ಟಿ.ರವಿ

ವಿಧಾನಪರಿಷತ್‌ನ ಚುನಾವಣೆಗೆ ಟಿಕೆಟ್‌
Last Updated 15 ಜೂನ್ 2020, 13:05 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಪಕ್ಷಕ್ಕಾಗಿ ಹೋರಾಡಿ ಸಂಘಟಿಸಿರುವವರನ್ನು, ಆಡಳಿತ ಪಕ್ಷವಾಗಲು ಕಾರಣಕರ್ತರಾದವರನ್ನೂ ಗಮನದಲ್ಲಿಟ್ಟುಕೊಂಡು ವಿಧಾನಪರಿಷತ್‌ನ ಚುನಾವಣೆಗೆ ಟಿಕೆಟ್‌ ವಿಚಾರದಲ್ಲಿ ಸಮತೋಲನದ ನಿರ್ಣಯ ಕೈಗೊಳ್ಳಬೇಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸುತ್ತೇವೆ. ಹಳಬರು ಮತ್ತು ಹೊಸಬರು ಇಬ್ಬರನ್ನೂ ಕಡೆಗಣಿಸುವಂತಿಲ್ಲ. ಸಾಮಾಜಿಕ ನ್ಯಾಯಕ್ಕೂ ಒತ್ತು ನೀಡಬೇಕಿದೆ’ ಎಂದು ಉತ್ತರಿಸಿದರು.

‘ರಾಜ್ಯಸಭೆಗೆ ಸವಿತಾ ಸಮುದಾಯವರೊಬ್ಬರಿಗೆ ಟಿಕೆಟ್‌ ನೀಡಿದ್ದಕ್ಕೆ ಆ ಇಡೀ ಸಮುದಾಯ ಸಂಭ್ರಮಪಟ್ಟಿದೆ. ಹೀಗೆ ಸಣ್ಣ ಸಮುದಾಯಗಳು, ಪಕ್ಷಕ್ಕಾಗಿ ದುಡಿದವರನ್ನು ಗಮನದಲ್ಲಿಟ್ಟುಕೊಂಡು ನಿರ್ವವಹಿಸಬೇಕಾದ ಸವಾಲು ಇದೆ. ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಿದೆ. ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು, ಕೇಂದ್ರದ ವರಿಷ್ಠರು ಎಲ್ಲರೊಂದಿಗೆ ಚರ್ಚಿಸುತ್ತೇವೆ. ಪಕ್ಷ ಮತ್ತು ಜನರ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT