ಚಿಕ್ಕಮಗಳೂರು: ‘ಯಾರಿಗೆ ಕೌಶಲದ ಜೊತೆಗೆ ತಪಸ್ಸು ಇರುತ್ತದೋ ಅವರು ಅಮರ ಶಿಲ್ಪಿಗಳಾಗುತ್ತಾರೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಲೆ ಶಿಲ್ಪಿಯ ಕೈಗೆ ಸಿಕ್ಕಾಗ ಮಾತ್ರ ಅದು ಶಿಲ್ಪವಾಗುತ್ತೆ. ಎಲ್ಲರೂ ಅಮರ ಶಿಲ್ಪಿಗಳು ಆಗಲು ಸಾಧ್ಯವಿಲ್ಲ. ನಮ್ಮ ಜಕಣಾಚಾರಿ ಅವರಿಗೆ ಕೌಶಲವೂ ಇತ್ತು, ಶ್ರದ್ಧೆ ಎಂಬ ತಪಸ್ಸು ಕೂಡ ಇತ್ತು ಈ ಕಾರಣಕ್ಕೆ ಅವರು ಅಮರಶಿಲ್ಪಿ ಆದರು ಎಂದರು.

ರಾಜಾಶ್ರಯ ಇಲ್ಲದೆ ಇದ್ದರೆ ತನ್ನ ಸ್ವಂತ ಸಾಮರ್ಥ್ಯದಿಂದ ಒಂದೆರಡೂ ಶಿಲ್ಪವನ್ನು ಮಾಡಬಹುದು. ಆದರೆ, ಬೇಲೂರು–ಹಳೇಬೀಡಿನಂತಹ ಅಥವಾ ಅಮೃತಪುರದಂತಹ ಅದ್ಭುತವಾದ ಶಿಲಾ ಕೌಶಲವನ್ನು ಭೂಮಿಗೆ ಇಳಿಸಲು ರಾಜಾಶ್ರಯ ಬೇಕು ಎಂದು ಹೇಳಿದರು.

ಜಕಣಾಚಾರಿಯವರಿಗೆ ಪ್ರತಿಭೆ ಹಾಗೂ ಕೌಶಲಕ್ಕೆ ಹೊಯ್ಸಳರ ದೊರೆ ವಿಷ್ಣುವರ್ಧನ ಹಾಗೂ ಶಾಂತಲಾದೇವಿಯವರ ರಾಜಾಶ್ರಯ ದೊರಕಿತ್ತು. ಅದ್ಭುತವಾದಂತಹ ಸಾವಿರ ವರ್ಷಗಳ ನಂತರವೂ ಕುತೂಹಲಕ್ಕೆ ಕಾರಣವಾಗುವ, ವಿಜ್ಞಾನಕ್ಕೆ ಸವಾಲಾಗುವ ಇದು ಮನುಷ್ಯರೇ ಮಾಡಲು ಸಾಧ್ಯವಾ ಅನಿಸುವ ಕಲ್ಲಿನಲ್ಲೇ ಮುಖಗಳನ್ನು ಕೆತ್ತುವ ಕಲೆಯನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಭಾರತ ದೇಶ ಕೌಶಲ, ಕಲೆ, ಸಂಸ್ಕೃತಿ, ಸಾಹಿತ್ಯದಲ್ಲಿ ಜಗತ್ತಿಗೆ ಮಾದರಿಯಾಗಿತ್ತು. ಇದನ್ನು ಯಾರಾದರೂ ಪ್ರಶ್ನಿಸಿದರೆ ಬೇಲೂರು, ಹಳೆಬೀಡು, ಅಜಂತಾ, ಎಲ್ಲೋರಾಗಳ ಅದ್ಭುತವಾದ ಶಿಲ್ಪಕಲೆಯನ್ನು ತೋರಿಸಬಹುದು. ಭಾರತದಲ್ಲಿ ತಯಾರಾದ ಆಭರಣ, ವಸ್ತುಗಳಿಗೆ ವಿದೇಶಿಯರು ಮುತ್ತಿಗೆ ಬೀಳುತ್ತಿದ್ದರು. ಇಂದಿಗೂ ದೇಶದಲ್ಲಿ ಜಕಣಾಚಾರಿಯ ಪರಂಪರೆಯನ್ನು ಮುಂದುವರೆಸುವ ಶಿಲ್ಪಿಗಳು ಇದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತಿದವರು ಸಹ ಕನ್ನಡಿಗರೇ ಆಗಿದ್ದಾರೆ. ಎಂದರು.

ವಿಶೇಷ ಉಪನ್ಯಾಸ ನೀಡಿದ ಸಾಮಾಜಿಕ ಚಿಂತಕ ಹರ್ಷವರ್ಧನ್, ಅಮರಶಿಲ್ಪಿ ಜಕಣಾಚಾರಿ ಅಂದರೆ ಅದೊಂದು ಹೆಸರಲ್ಲ ಅದು ಪರಂಪರೆ, ಶಿಲೆಗೆ ಉಸಿರನ್ನು ತುಂಬಿದ ಕಲಾವಿದ, ಕಲ್ಲಿಗೆ ಸಂವೇದನೆ ನೀಡಿದ ಸೃಷ್ಟಿಕರ್ತ. ಅವರು ರಚನೆ ಮಾಡಿದ್ದು ಯಾವುದೋ ಕಾಲದಲ್ಲಿ ಇಂದಿಗೂ ಕೂಡ ನಾವು ದೇವರಂತೆ ಕಾಣುತ್ತಿದ್ದೇವೆ ಎಂದರು.

ಬೇಲೂರು–ಹಳೇಬಿಡಿನಲ್ಲಿ ಅದ್ಭುತ ಶಿಲ್ಪ ಕಲೆಗಳು ಇವೆ. ನಾವು ಅಲ್ಲಿಗೆ ಹೋದಾಗ ಕಲ್ಲುಗಳನ್ನ ಕಾಣುವುದಿಲ್ಲ ಮಾನವನ ಭಾವನೆಗಳನ್ನ ಕಾಣುತ್ತೇವೆ. ಆ ಕಲ್ಲುಗಳಲ್ಲಿ ಭಕ್ತಿ ಕಾಣುತ್ತದೆ. ನಗು– ನೋವು, ಶಾಂತಿ–ಶೌರ್ಯ ಕಾಣುತ್ತದೆ. ಒಂದು ಕಲ್ಲು ಕೂಡ ಮಾತನಾಡುತ್ತದೆ ಎಂದು ಜಗತ್ತಿಗೆ ಸಾರಿದ ವ್ಯಕ್ತಿ ಎಂದರೆ ಅದು ಜಕಣಾಚಾರಿಯರು ಎಂದು ಬಣ್ಣಿಸಿದರು.

ಅಮರ ಶಿಲ್ಪಿ ಜಕಣಾಚಾರಿ ಅವರ ಕೆಲಸದಲ್ಲಿ ಯಾಂತ್ರಿಕತೆ ಕಾಣುವುದಿಲ್ಲ ಮಾನವೀಯತೆ ಕಾಣುತ್ತದೆ. ಅವರು ಶಿಲ್ಪಕಲಾ ಕೃತಿಗಳಲ್ಲಿ ಅತಿರೇಖಾ ಇಲ್ಲ ಸಮತೋಲನ ಕಾಣುತ್ತದೆ. ಎಲ್ಲಿಯೂ ಕೂಡ ಆಡಂಬರ ಇಲ್ಲ, ಆತ್ಮಸೌಂಧರ್ಯ ಇದೆ. ಇದು ಅಮರಶಿಲ್ಪಿ ಜಕಣಾಚಾರಿ ಅವರ ಶಿಲ್ಪ ಕಲೆಯ ವಿಶೇಷತೆ ಎಂದು ಅವರು ಹೇಳಿದರು.

ರಾಜ್ಯ ಶಿಲ್ಪಕಲಾ ಅಕಾಡೆಮಿಯ ಸದಸ್ಯ ವಿಶ್ವಕರ್ಮ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಂ.ಜೆ. ಚಂದ್ರಶೇಖರ್, ವಿಶ್ವಕರ್ಮ ಕೈಗಾರಿಕೆ ಮತ್ತು ವಿವಿಧೋದ್ದೇಶ ಸಹಕಾರ ಸಂಘದ ಸತೀಶ್, ಸಮಾಜದ ಮುಖಂಡರಾದ ಭೀಮಾಚಾರ್, ನಾರಾಯಣಾಚಾರ್, ಉಮಾಶಂಕರ್, ಕೃಷ್ಣಾಚಾರ್ ಭಾಗವಹಿಸಿದ್ದರು.

ಭಾರತ ಸರ್ಕಾರದಿಂದ 18 ಕುಲಕಸುಬುಗಳಿಗೆ ಪಿ.ಎಂ. ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ಭಾರತ ಸಭ್ಯ ಸುಸಂಸ್ಕೃತ ರಾಷ್ಟ್ರವಾಗಿ ಬದಲಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ
ಸಿ.ಟಿ ರವಿ ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.