ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ಮರಣ ಪ್ರಮಾಣ ಪತ್ರ ಪಡೆಯಲು ಅಲೆದಾಟ

Published 10 ಫೆಬ್ರುವರಿ 2024, 5:08 IST
Last Updated 10 ಫೆಬ್ರುವರಿ 2024, 5:08 IST
ಅಕ್ಷರ ಗಾತ್ರ

ಕೊಪ್ಪ: ಮರಣ ಪ್ರಮಾಣ ಪತ್ರ ಪಡೆಯಲು ತಿಂಗಳುಗಟ್ಟಲೆ ಅಲೆದಾಡ ಬೇಕಾದ ಸ್ಥಿತಿ ತಾಲ್ಲೂಕಿನಲ್ಲಿದೆ. ತಾಯಿಯೊಬ್ಬರು ತಮ್ಮ ಮಗನ ಮರಣ ಪ್ರಮಾಣ ಪತ್ರ ಪಡೆಯಲು ತಿಂಗಳಿಂದ ಅಲೆಯುತ್ತಿದ್ದಾರೆ.

ತಾಲ್ಲೂಕಿನ ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿ ಕಲ್ಕೆರೆ ನಿವಾಸಿ ಸಾವಿತ್ರಿ ಅವರ 14 ವರ್ಷದ ಮಗ ಕಾರ್ತಿಕ್ ಜ.3 ರಂದು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಖಾಸಗಿ ಆಸ್ಪತ್ರೆಯಿಂದ ಕಡತ ಪಟ್ಟಣ ಪಂಚಾಯಿತಿಗೆ ತಲುಪಿದೆ. ಆದರೆ, ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಪ್ರಮಾಣಪತ್ರ ಸಿಕ್ಕಿಲ್ಲ.

‘ಡಿ.ಎಸ್.ಕೀ(ಡಿಜಿಟಲ್ ಸೈನ್ ಕೀ) ಅಪ್ರೂವ್ ಆಗುತ್ತಿಲ್ಲ. 1 ತಿಂಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಕಳೆದ 15 ದಿನಗಳ ಹಿಂದೆ ಫೈಲ್ ಅಪ್ರೂವ್ ಆಗಿತ್ತು, ಬಳಿಕ ಸ್ಥಗಿತಗೊಂಡಿದೆ. ಎನ್.ಆರ್.ಪುರದಲ್ಲಿಯೂ ವಿಚಾರಿ ಸಿದೆ, ಅಲ್ಲಿಯೂ ಅದೇ ಸಮಸ್ಯೆ ಇದೆಯಂತೆ. ಎನಿಡೆಸ್ಕ್ ತೆಗೆದುಕೊಂಡು ಸಮಸ್ಯೆ ಬಗೆಹರಿಸಲು ದಿನಗಟ್ಟಲೆ ಕಾಯಬೇಕಿದೆ, ಮೃತಪಟ್ಟು 21 ದಿನಗಳೊಳಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಆದರೆ, ನಮಗೂ ಸಮಸ್ಯೆಯಾಗಿ ಕಾಡಿದೆ’ ಎಂದು ಪಟ್ಟಣ ಪಂಚಾಯಿತಿ ಸಿಬ್ಬಂದಿ ಹೇಳಿದರು.

‘ವಿನಾ ಕಾರಣ ಬಡವರನ್ನು ಅಲೆಸಲಾಗುತ್ತಿದೆ, ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸುತ್ತೇವೆ’ ಎಂದು ಡಿಎಸ್ಎಸ್ ಮುಖಂಡ ರವೀಂದ್ರ ಕವಡೇಕಟ್ಟೆ ಹೇಳಿದರು.

‘ಎರಡು ದಿನದಲ್ಲಿ ಪರಿಹಾರ’
‘ಹೊಸ ಸಾಫ್ಟ್‌ವೇರ್‌ನಿಂದ ಸಮಸ್ಯೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಪ್ರಮಾಣ ಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕೊಪ್ಪದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕಾಂತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT