ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನವನ್ನು ಉಳಿಸಿಕೊಳ್ಳಲು ಒಂದಾಗಬೇಕು: ಡಿ.ಕೆ ಶಿವಕುಮಾರ್

Published 23 ಏಪ್ರಿಲ್ 2023, 4:52 IST
Last Updated 23 ಏಪ್ರಿಲ್ 2023, 4:52 IST
ಅಕ್ಷರ ಗಾತ್ರ

ಶೃಂಗೇರಿ: 'ಎಲ್ಲ ಜಾತಿ, ಧರ್ಮದವರ ಹಿತ ಕಾಯುವುದು ಕಾಂಗ್ರೆಸ್ ಪಕ್ಷದ ಧರ್ಮ. ಶೃಂಗೇರಿ ಕ್ಷೇತ್ರ ರೈತ ಪ್ರಧಾನವಾದ ಕ್ಷೇತ್ರವಾಗಿದೆ. ತಾಂಬೂಲದಲ್ಲಿಟ್ಟು ದೇವರೆಂದು ಪೂಜಿಸುವ ಅಡಿಕೆಯನ್ನು ಉಳಿಸಿಕೊಳ್ಳದ ಸರ್ಕಾರ, ಇನ್ನು ಯಾವುದನ್ನು ಉಳಿಸಿಕೋಳ್ಳುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು. 

ಶೃಂಗೇರಿ ಜೆಸಿಬಿಎಂ ಕಾಲೇಜಿನ ಮೈದಾನದಲ್ಲಿ ಶನಿವಾರ ನಡೆದ ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಪಕ್ಷದ ನಿಲುವು ಜನರ ಭಾವನೆ ಕೆರಳಿಸುವುದು. ಆದರೆ, ಕಾಂಗ್ರೆಸ್ ಪಕ್ಷದ ನಿಲುವು ಜನರ ಬದುಕು. ಜನರೊಂದಿಗೆ ಮೊದಲು ನಗುತ್ತಾ ಮಾತನಾಡುವುದು ಹಾಲಿ ಶಾಸಕರ ನಡೆ. ಮೊದಲು ಗಂಟು ಮುಖದೊಂದಿಗೆ ಮಾತನಾಡಿ, ಆಮೇಲೆ ನಗುವುದೇ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯ ನಡೆ. ಧರ್ಮ ಯಾವುದಾದರೂ ದೈವ ಒಂದೆ. ನಾಮ ಹಲವು ಆದರೂ ದೇಹ ಒಂದೇ.  ಸಂವಿಧಾನವನ್ನು ಉಳಿಸಿಕೊಳ್ಳಲು ಎಲ್ಲ ವರ್ಗದವರು ಒಂದಾಗಬೇಕು. ಮೆ.10ನೇ ತಾರೀಕು ಭ್ರಷ್ಟಚಾರವನ್ನು ಕಿತ್ತು ಎಸೆಯುವ ಮಹತ್ತರ ದಿನವಾಗುತ್ತದೆ’ ಎಂದರು.

‘ಈಗಿನ ಬಿಜೆಪಿ ಸರ್ಕಾರ ಜಿಎಸ್‍ಟಿ, ತೈಲ ಬೆಲೆ, ಅಡಿಗೆ ಅನಿಲ ಮತ್ತು ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಬಿಜೆಪಿಯ ಸಹಾವಾಸ ಸಾಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ ಎಂದ ಅವರು,  ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸೈಕಲ್ ಮತ್ತು ಸೀರೆ ಮಾತ್ರ ನೀಡಿದ್ದಾರೆ’ ಎಂದು ಲೇವಡಿ ಮಾಡಿದರು.

‘ಭಕ್ತರಿಗೂ ಮತ್ತು ಗುರುವಿಗೂ ಇರುವ ಸಂಬಂಧವೇ, ನನ್ನ ಮತ್ತು ಶೃಂಗೇರಿ ಕ್ಷೇತ್ರಕ್ಕೆ ಇರುವ ಸಂಬಂಧ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಕಾಲದಿಂದಲೂ ಮಠಕ್ಕೆ ಮತ್ತು ನಮಗೆ ಅವಿನಭಾವ ಸಂಬಂಧವಿದೆ’  ಎಂದು ಶಿವಕುಮಾರ್ ಹೇಳಿದರು.

‘ಅಧಿಕಾರಕ್ಕೆ ಬಂದ ಮರುದಿನವೇ ಗ್ಯಾರಂಟಿ ಕಾರ್ಡ್‌ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮರು ದಿನವೇ ಗ್ಯಾರಂಟಿ ಕಾರ್ಡ್ ಯೋಜನೆ ಜಾರಿಯಾಗುತ್ತದೆ. ಮಲೆನಾಡಿನಲ್ಲಿರುವ ಜ್ವಲಂತ ಸಮಸ್ಯೆಗಳಾದ 4(1)ನ್ನು ಡಿನೋಟಿಫಿಕೇಶನ್ ಮಾಡಿ ತೆಗೆದು ಹಾಕಿ ರೈತರಿಗೆ ಅನುಕೂಲ ಮಾಡಿಕೋಡುತ್ತೇವೆ. ಎಲೆಚುಕ್ಕಿರೋಗಕ್ಕೆ ಸೂಕ್ತ ಪರಿಹಾರ ನೀಡುತ್ತೇವೆ‘ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಅಂಶುಮಂತ್, ಎಐಸಿಸಿಯ ಸಂಧಿಪ್, ಎಂಎಲ್‍ಸಿ ಶ್ರೀನಿವಾಸ್, ಗಾಯಿತ್ರಿ ಶಾಂತೇಗೌಡ, ಬಿ.ಎಲ್ ಶಂಕರ್, ಕುಕ್ಕುಡಿಗೆ ರವೀಂದ್ರ, ಸಚಿನ್ ಮೀಗಾ, ರಮೇಶ್ ಭಟ್, ಸತೀಶ್ ಎಚ್.ಎಂ, ಬಾಳೆಮನೆ ನಟರಾಜ್, ಶ್ರೀಜಿತ್, ಸುಧೀರ್ ಕುಮಾರ್ ಮುರೋಳ್ಳಿ, ಎಂ.ಎಚ್ ನಟರಾಜ್, ಶಕಿಲಾ ಗುಂಡಪ್ಪ ಇದ್ದರು.

ಶೃಂಗೇರಿ ಜೆಸಿಬಿಎಂ ಕಾಲೇಜಿನ ಮೈದಾನದಲ್ಲಿ ಶನಿವಾರ ಆಯೋಜಿಸದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯ ಕಾರ್ಯಕ್ರಮದಲ್ಲಿ ಸೇರಿರುವ ಜನರು
ಶೃಂಗೇರಿ ಜೆಸಿಬಿಎಂ ಕಾಲೇಜಿನ ಮೈದಾನದಲ್ಲಿ ಶನಿವಾರ ಆಯೋಜಿಸದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯ ಕಾರ್ಯಕ್ರಮದಲ್ಲಿ ಸೇರಿರುವ ಜನರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT