ನಕಲಿ ದಾಖಲೆ ಸೃಷ್ಟಿಸಿ ವಂಚನೆ : ಆರೋಪಿ ಬಂಧನ

7

ನಕಲಿ ದಾಖಲೆ ಸೃಷ್ಟಿಸಿ ವಂಚನೆ : ಆರೋಪಿ ಬಂಧನ

Published:
Updated:

ಕೊಪ್ಪ: ಅನಧಿಕೃತ ಮನೆ ನಿವೇಶನ ಸಕ್ರಮೀಕರಣದ (94ಸಿ) ನಕಲಿ ಹಕ್ಕುಪತ್ರ ಸೃಷ್ಟಿಸಿ ಮಹಿಳೆಯೊಬ್ಬರಿಗೆ ವಂಚಿಸಿರುವ ಆರೋಪದಲ್ಲಿ ಮೇಲಿನಪೇಟೆಯ ಅಹಮದ್ ಎಂಬಾತನನ್ನು ಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಜೋತಿಷಿ ದಿ. ಬಾಲಗೋಪಾಲ ಜೋಯಿಸರ ಪತ್ನಿ ಆರುಂಧತಿ ಅವರಿಗೆ ಕೊಪ್ಪ ಗ್ರಾಮದ ಸರ್ವೇ ನಂ. 130ರಲ್ಲಿ 30x40ರ ಮನೆ ನಿವೇಶನವನ್ನು ಸಕ್ರಮಗೊಳಿಸುವುದಾಗಿ ₹20 ಸಾವಿರ ಹಣ ಪಡೆದಿದ್ದ ಅಹಮದ್ ಅನಧಿಕೃತ ಮನೆ ಸಕ್ರಮೀಕರಣದ ನಕಲಿ ಹಕ್ಕುಪತ್ರ ಸೃಷ್ಟಿಸಿ ತಹಶೀಲ್ದಾರರ ಸಹಿ ಮತ್ತು ಸೀಲನ್ನೂ ಪೋರ್ಜರಿ ಮಾಡಿ ಆರುಂಧತಿಯವರಿಗೆ ನೀಡಿದ್ದ ಎನ್ನಲಾಗಿದೆ.

ಈ ಹಕ್ಕುಪತ್ರ ಅಸಲಿಯೇ ಎಂದು ತಿಳಿಯಲು ಶುಕ್ರವಾರ ತಾಲ್ಲೂಕು ಕಚೇರಿಗೆ ತೆರಳಿದ್ದ ಆರುಂಧತಿ ಅವರು ತಹಶೀಲ್ದಾರರಿಗೆ ತೋರಿಸಿದಾಗ ಅದು ನಕಲಿ ಹಕ್ಕುಪತ್ರವೆಂದೂ ಅದರಲ್ಲಿರುವ ಸಹಿಯೂ ತನ್ನದಲ್ಲವೆಂದು ತಹಶೀಲ್ದಾರ್ ತಿಳಿಸಿದ್ದಾರೆ. ಕೂಡಲೇ ಆರುಂಧತಿಯವರು ಅಹಮದ್ ನನ್ನು ಮನೆಗೆ ಕರೆಸಿ ವಿಚಾರಿಸಿದಾಗ. ತಾನು ನೀಡಿದ್ದು ಅಸಲಿ ಹಕ್ಕುಪತ್ರವೆಂದೂ, ನಿಮಗೆ ಬೇಡದಿದ್ದರೆ ವಾಪಾಸು ಕೊಡಿ ಎಂದು ಹೇಳಿ ಅಹಮದ್ ₹20 ಸಾವಿರ ಹಣ ವಾಪಾಸು ನೀಡಿದ್ದಾನೆ. ಅದಾಗಲೇ ಈ ಸುದ್ದಿ ತಿಳಿದು ಅಲ್ಲಿಗೆ ಬಂದಿದ್ದ ಕಂದಾಯ ಅಧಿಕಾರಿಗಳು ಅಹಮದ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ರಾಜಸ್ವ ನಿರೀಕ್ಷಕರ ಕಚೇರಿ, ತಾಲ್ಲೂಕು ಕಚೇರಿಗೆ ಕರೆದೊಯ್ದು ಪರಿಶೀಲನೆ ನಡೆಸಿದಾಗ ಆ ಹಕ್ಕುಪತ್ರ ನಕಲಿ ಎಂಬುದು ಸಾಬೀತಾಗಿದೆ.

ಬಳಿಕ ಆರುಂಧತಿ ಅವರು ಕೊಪ್ಪ ಠಾಣೆಗೆ ತೆರಳಿ ನೀಡಿದ ದೂರಿನಂತೆ ಪೊಲೀಸರು ಅಹಮದ್‌ನನ್ನು ಬಂಧಿಸಿದರು. ಈ ಹಿಂದೆಯೂ ಅಹಮದ್ ಇದೇ ರೀತಿ ನಕಲಿ ದಾಖಲೆ ಸೃಷ್ಟಿಸಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !