ಅಗಳಗಂಡಿ( ಬಾಳೆಹೊನ್ನೂರು): ಅಗಳಗಂಡಿ ಗ್ರಾಮ ಪಂಚಾಯಿತಿಯ ಹೆಗ್ಗಾರು ಗ್ರಾಮದ ವ್ಯಾಪ್ತಿಯ ಹುಲ್ತಾಳ್, ನಕೃಗೋಳಿ ಹಾಗೂ ಬಂಗಾಡಿ ಕಾಡಿನಲ್ಲಿ ‘ಅರಣ್ಯ ಇಲಾಖೆ ಗಿಡ ನೆಡುವ ಯೋಜನೆ’ಯನ್ನು ವಿರೋಧಿಸಿ, ಗ್ರಾಮಸ್ಥರು ಶನಿವಾರ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ನಡೆಸಿದರು.

ಈ ಹಿಂದೆ ಎಚ್ಚರಿಕೆ ನೀಡಿದ ನಂತರವೂ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಕಾಡಿನೊಳಗೆ ಗಿಡ ನೆಡಲು ಗುಂಡಿತೊಡಲು ಮುಂದಾದಾಗ, ಗ್ರಾಮಸ್ಥರು ತಡೆಯಲು ಯತ್ನಿಸಿದ್ದರು. ಆ ವೇಳೆ ಊರಿನ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಕೆರಳಿದ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದರು. ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿನೊಳಗೆ ಗಿಡ ನೆಡುವ ಕೆಲಸವನ್ನು ಸ್ಥಗಿತಗೊಳಿಸಿದ್ದರಿಂದ ಸಂಕೇತಿಕವಾಗಿ ಉಪವಾಸ ಧರಣಿ ಮಾಡಿ, ಸಭೆಯಲ್ಲಿ ನಿರ್ಣಯವನ್ನು ಚರ್ಚಿಸಲಾಯಿತು.

ಮಲೆನಾಡಿನಲ್ಲಿ ಇಂತಹ ಯೋಜನೆಗಳು ಅವೈಜ್ಞಾನಿಕವಾಗಿದ್ದು, ಅನಾದಿಕಾಲದಿಂದಲೂ ಕಾಡನ್ನು ಉಳಿಸುತ್ತಾ ಇಲ್ಲೇ ಇದ್ದು ಬದುಕನ್ನು ಕಟ್ಟಿಕೊಂಡು ಜೀವನ ಮಾಡುತ್ತಿರುವ ಈ ಹೊತ್ತಿನಲ್ಲಿ ಇಂತಹ ಯೋಜನೆ ಜಾರಿ ತಂದು ಮಲೆನಾಡಿಗರ ಹಾಗೂ ಆದಿವಾಸಿ ಜನರ ನಿದ್ದೆ ಕೆಡಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಮಲೆನಾಡಿನ ಜನರು ನಾಗರ ಬನ, ದೇವರ ಬನ, ಸೊಪ್ಪಿನ ಹಾಡ್ಯಾ ಹಾಗೂ ಒಳಹಕ್ಲು ಎಂದು ಮನೆ ಸುತ್ತಮುತ್ತಲಿನ ಕಾಡು ಗುಡ್ಡಗಳನ್ನು ರಕ್ಷಿಸಿಕೊಂಡು ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲವನ್ನೂ ಸೆಕ್ಷನ್ 4(1), ಕಾಯ್ದೆಯಡಿ ತಂದು ಕಾಡು ಗುಡ್ಡಗಳನ್ನು ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತ ಜನರ ಬದುಕನ್ನು ಕಿತ್ತುಕೊಳ್ಳುತ್ತಿದೆ.

ಶತಮಾನದಿಂದಲೂ ಹುಟ್ಟಿಬೆಳೆದ ಕಾಡಲ್ಲಿ ಆದಿವಾಸಿ ರೈತರು ಬದುಕನ್ನು ಕಟ್ಟಿಕೊಂಡಿದ್ದರು. ಕನಿಷ್ಠ ಬದುಕನ್ನು ಕಟ್ಟಿಕೊಳ್ಳಲು ಮಾಡಿಕೊಂಡಿದ್ದ ಸಾಗುವಳಿ ಭೂಮಿಗೆ ಹಕ್ಕುಪತ್ರವನ್ನು ಈ ಕಾಯ್ದೆಗಳಿಂದ ಕೊಡಲಾಗುತ್ತಿಲ್ಲ. ತಕ್ಷಣ ಈ ರೀತಿಯ ಯೋಜನೆ ಕೈ ಬಿಟ್ಟು ಇಲ್ಲಿನ ಮೂಲನಿವಾಸಿಗಳಿಗೆ ಸಾಗುವಳಿ ಭೂಮಿಗೆ ಮತ್ತು ವಾಸಿಸುವ ಮನೆಗೆ ಹಕ್ಕುಪತ್ರ ನೀಡುವುದರೊಂದಿಗೆ ನೈಸರ್ಗಿಕವಾಗಿರುವ ಮಲೆನಾಡಿನ ಗುಡ್ಡ, ಕಾಡುಗಳನ್ನು ಅಲ್ಲಿನ ಜನರು ಹಿಂದೆ ಹೇಗೆ ರಕ್ಷಣೆ ಮಾಡಿಕೊಂಡು ಬಂದಿದ್ದರೋ ಹಾಗೆ ಅ ಹಕ್ಕು ಅಲ್ಲಿನ ಜನರಿಗೆ ನೀಡಬೇಕು. ಇಲಾಖೆಯ ಬೇರೆ ಬೇರೆ ಜನಪರ, ಪರಿಸರ ಯೋಜನೆಗೆ ಇಲ್ಲಿನ ಜನರ ಸಹಕಾರ ಇರುತ್ತದೆ. ಸ್ಥಗಿತಗೊಳಿಸಿರುವ ಈ ಕಾಮಗಾರಿಯನ್ನು ಇವತ್ತು ನಿಲ್ಲಿಸಿದ್ದರೂ ಮುಂದೆ ಶಾಶ್ವತವಾಗಿ ನಿಲ್ಲಿಸಬೇಕು. ತಪ್ಪಿದಲ್ಲಿ ಹತ್ತಾರು ಮಲೆನಾಡಿಗರೊಂದಿಗೆ ಹೋರಾಟ ತೀವ್ರ ಗೊಳಿಸಲಾಗುವುದೆಂದು ನಿರ್ಣಯಿಸಲಾಯಿತು.

ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗಡಿಕಲ್, ಕರ್ನಾಟಕ ಜನಶಕ್ತಿಯ ಮಹಿಳಾ ಮುನ್ನಡೆ ರಾಧ ಹಾಗಲಗಂಚಿ, ಪರಿಸರವಾದಿ ಗುರುಮೂರ್ತಿ ಜೋಗಿಬೈಲು, ಸುಲೋಚನಾ ಹುಲ್ತಾಳ್, ಲೀಲಾವತಿ, ಸುಶೀಲ, ಹೇಮಾ, ರಾಜೇಶ್, ವಿನಯ್, ಹರೀಶ್ ಹಾಗೂ ಗೋಪಾಲಗೌಡ, ಕೃಪಾ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.