ಕಡೂರು: ಸರಳತೆಗೆ ಅನ್ವರ್ಥವಾದ ಮಹಾತ್ಮ ಗಾಂಧೀಜಿ ದೇಶ ಕಂಡ ಮಹಾನ್ ಚೇತನ ಎಂದು ಶಾಸಕ ಬೆಳ್ಳಿಪ್ರಕಾಶ್ ಬಣ್ಣಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಚಿಂತನೆಗಳಿಗೆ ಪೂರಕವಾಗಿ ನಾವು ಮುನ್ನಡೆಯಬೇಕಿದೆ. ಸ್ವಚ್ಛತೆಯ ಪರಿಕಲ್ಪನೆ ಮತ್ತು ರಾಮರಾಜ್ಯದ ಕನಸನ್ನು ಹೊತ್ತಿದ್ದ ಗಾಂಧೀಜಿ ಅವರ ಪರಿಕಲ್ಪನೆಗೆ ಮರು ಜೀವ ನೀಡಿದ ದೇಶದ ಪ್ರಧಾನಿ ನರೇಂದ್ರ ಮೋದಿ ಗಾಂಧಿ ತತ್ವವನ್ನು ಸಾಕಾರಗೊಳಿಸಿದ್ದಾರೆ ಎಂದರು.
ಸರ್ವ ಧರ್ಮಗ್ರಂಥಗಳ ಪಠಣ ನಡೆಯಿತು. ಧರ್ಮಗುರು ಟಿ.ಎಸ್. ಪೌಲ್‌ರಾಜ್ ಅವರು ಬೈಬಲ್ ಮತ್ತು ಮುಸ್ಲಿಂ ಧರ್ಮಗುರು ಮೌಲಾನ ಮುಕ್ತಿ ಸಮಿ ಉಲ್ಲಾಖಾನ್ ಕುರಾನ್ ಪಠಿಸಿದರು. ಯಳನಡು ಮಠದ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ತಹಶೀಲ್ದಾರ್ ಜೆ. ಉಮೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ರೇವಣ್ಣಯ್ಯ, ವಕೀಲ ಕೆ.ಎನ್. ಬೊಮ್ಮಣ್ಣ, ತಾಲ್ಲೂಕು ಪಂಚಾಯಿತಿ ಇ.ಒ ಡಾ.ಟಿ.ಎಂ. ದೇವರಾಜ್ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.